ಹಾಸನ: ನಗರದಲ್ಲಿ ಬುದ್ಧಿಮಾಂದ್ಯ ಯುವತಿಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರಗೈದಿದ್ದ ಮೂವರು ಕೀಚಕ ಆರೋಪಿಗಳನ್ನ ಪೆನ್ಷನ್ ಮೊಹಲ್ಲಾ ಪೊಲೀಸರು ಬಂಧಿಸಿದ್ದಾರೆ.
ಉಮ್ರೆಜ್ ಪಾಷಾ, ಅಫ್ಪು ಮತ್ತು ಜುನೈದ್ ಬಂಧಿತ ಆರೋಪಿಗಳಾಗಿದ್ದಾರೆ. ಆದರೆ ಇದಕ್ಕೂ ಮುನ್ನ ಅತ್ಯಾಚಾರ ಮಾಡಿದ್ದ ಈ ಮೂವರನ್ನ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿರುತ್ತಾರೆ ಎಂಬ ಮಾಹಿತಿ ದೊರೆತಿದೆ.
ಮೆಕಾನಿಕ್ ಕೆಲಸಮಾಡುವ ದಂಪತಿ ಮಗಳಾದ ಬುದ್ಧಿಮಾಂದ್ಯ ಹುಡುಗಿ ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದಳು. ಇದನ್ನ ತಿಳಿದಿದ್ದ ಮೂವರು ಕೀಚಕರು. ಎಂದಿನಂತೆ ಮನೆಯವರೆಲ್ಲರೂ ಕೆಲಸಕ್ಕೆ ತೆರಳಿದ ಮೇಲೆ ಯುವತಿ ಮನೆಯಲ್ಲಿಯೇ ಒಬ್ಬಳೇ ಇದ್ದುದ್ದನ್ನ ಗಮನಿಸಿ ಮನೆಗೆ ನುಗ್ಗಿ ಅತ್ಯಾಚಾರಗೈದಿದ್ದು ಹಾಗೆ ರೆಕಾರ್ಡ್ ಮಾಡಿ ವೈರಲ್ ಕೂಡ ಮಾಡಿದ್ದಾರೆ.
ಸಂತ್ರಸ್ಥೆ ಯುವತಿಯ ಸಹೋದರ ಮನೆಗೆ ಬಂದಾಗ ಅವರನ ಮೊಬೈಲ್ ಗೆ ಈ ವಿಡಿಯೋ ಬಂದಿದ್ದನ್ನ ನೋಡಿ ಶಾಕ್ ಆಗಿ ಇದನ್ನ ಸೂಕ್ಷ್ಮವಾಘಿ ಪರಿಗಣಿಸಿ ಪರಿಶೀಲಿಸಲು ಹೊರಟಾಗ ಉಮ್ರೆಜ್ ಪಾಷಾ ಮೊಬೈಲಿನಿಂದ ಅವನ ಸ್ನೇಹಿತನಿಗೆ ಬಂದಿದ್ದು ಗೊತ್ತಾಗಿದೆ.
ಆದರೆ ಉಮ್ರಾಜ್ ಪಾಷಾ ಮೊಬೈಲ್ ನಲ್ಲಿದ್ದ ವಿಡಿಯೋ ಡಿಲಿಟ್ ಮಾಡಿದ್ದ . ಅದನ್ನ ಅರಿತ ಯುವತಿ ಸಹೋದರ ಪೆನ್ಷನ್ ಮೊಹಲ್ಲ ಠಾಣೆಗೆ ದೂರು ನೀಡಿದ್ದು ಪೊಲೀಸರು ತಕ್ಷಣ ಅಲರ್ಟ್ ಆಗಿ ಕಾರ್ಯಾಚರಣೆ ನಡೆಸಿ ಅತ್ಯಾಚಾರಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ಗಾಂಜಾ ಅಮಲು ಹೆಚ್ಚಾಗಿದ್ದು ಗಾಂಜಾ ಬಗ್ಗೆ ದೂರನ್ನು ಕೊಟ್ಟು ಈ ರೀತಿ ಮುಂದೆ ಆಘದಂತೆ ತಡೆಯಿರಿ ಹಾಘೆ ಗಾಂಜಾ ಮಾರಾಟ ಜಾಲವನ್ನು ತಿಳಿದು ಕೂಡಲೇ ಬಂಧಿಸಿ ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
