ಹಾಸನ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಮೇಲೆ ಪ್ರಿಯಕರ ಜೊತೆ ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿ ಲಕ್ಷ್ಮೀಪುರದಲ್ಲಿ ನಡೆದಿದೆ.
ಹೌದು .. ಸೋಮವಾರ ಎಂದಿನಂತೆ ಕೆಲಸಕ್ಕೆ ಹೋಗಿದ್ದ ನಂದೀಶ್, ಕೆಲಸವಿಲ್ಲವೆಂದು ಅರ್ಧ ಗಂಟೆಯಲ್ಲಿ ಮನೆಗೆ ವಾಪಸ್ ಆದಾಗ ನಂದೀಶ್ ಮನೆಯೊಳಗೇ ಶ್ರುತಿ ಮತ್ತು ಸುಜಿತ್ ಇಬ್ಬರೇ ಇದಿದ್ದು ಕಂಡು ಹೌಹಾರಿದ ನಂದೀಶ್.ಆಗ ಇಬ್ಬರ ನಡುವೆ ಮಾತುಕತೆ ನಡೆದಿ ಜಗಳಕ್ಕೇರಿದ್ದು ಆಮೇಲೆ ಇಬ್ಬರ ನಡುವಿನ ಅಕ್ರಮ ಸಂಬಂಧ ಬಯಲಾಗುತ್ತದೆ ಎಂದು ನಂದೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಿಯಕರ ಸುಜಿತ್.
ಗಾಯಗೊಂಡಿರುವ ನಂದೀಶ್ʼಗೆ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಸುಜಿತ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಂದೀಶ್ ಹಾಗೂ ಸಂಬಂಧಿಕರು ಆಗ್ರಹಿಸಿದ್ದಾರೆ.
ಹೊಸಪೇಟೆ ಗ್ರಾಮದ ಸುಜಿತ್ ಹೋಂ ಗಾರ್ಡ್ ವೃತ್ತಿಯಲ್ಲಿದ್ದು ಕಳೆದ ಆರು ತಿಂಗಳಿನಿಂದ ಶ್ರುತಿ ಜೊತೆ ಅಕ್ರಮ ಸಂಬಂಧ ಹೊಂದಿರುತ್ತಾನೆ.
ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.