ಯಾವುದೇ ಪರವಾನಗೆ ಪಡೆಯದೆ ಒಂಟಿ ನಳಿಕೆ ಮಸಿ ಕೋವಿಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂಬ ನಿಯಮವೇ ಇದೆ.
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹೋಬಳಿಯ ಕೆಳಗೂರು ಗ್ರಾಮದಲ್ಲಿ ರವಿ ಬಿನ್ ಪುಟ್ಟಸ್ವಾಮಿಗೌಡ
ಎಂಬುವರ ಮನೆಯಲ್ಲಿ ಆಕ್ರಮವಾಗಿ ಸಂಗ್ರಹಿಸಿದ್ದರು. ಗಸ್ತಿನಲ್ಲಿರುವಾಗ ಪೊಲೀಸ್ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಎಂದು ಹೇಳಲಾಗಿದೆ.

ರವಿ ಬಿನ್ ಪುಟ್ಟಸ್ವಾಮಿಗೌಡ ತಮ್ಮ ಮನೆಯ ಸೌದೆ ಒಟ್ಟಲಿನಲ್ಲಿ ಅಕ್ರಮವಾಗಿ ಯಾವುದೇ ಪರವಾನಗೆ ಪಡೆಯದೆ ಒಂಟಿ ನಳಿಕೆ ಮಸಿ ಕೋವಿಗಳನ್ನು ಅಕ್ರಮವಾಗಿ ಸಂಗ್ರಹಣೆ ಮಾಡಿದ್ದರಿಂದ ಆರೋಪಿ ಹಾಗೂ ಕೋವಿಯನ್ನು ವಶಕ್ಕೆ ಪಡೆದಿದ್ದು ಮೊ ನಂ 42/2024 3&25 ಭಾರತ ಶಸ್ತ್ರ ಕಾಯಿದೆ ರೀತಿ ಪ್ರಕರಣ ದಾಖಲಾಗಿದೆ.
ಆಲ್ದೂರು ಪಿಎಸ್ಐ ಶ್ರೀಮತಿ ಅಕ್ಷಿತಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿ ವಿಚಾರಣೆ ಬಳಿಕ ಸದರಿ ಪ್ರಕರಣದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದುದೆಂದು ಪೊಲೀಸು ಮೂಲಗಳು ಮಾಹಿತಿ ತಿಳಿಸಿವೆ.