ಬಳ್ಳಾರಿ : ದರ್ಶನ್ ಅಂದ್ರೆ ನಂಗೆ ಪ್ರಾಣ… ಅವ್ರಂದ್ರೆ ನಂಗಿಷ್ಟ… ನಾನು ಅವ್ರನ್ನ ಮದ್ವೆಯಾಗ್ಬೇಕು… ಗುರುವಾರ ಬೆಳಗ್ಗೆ ಬಳ್ಳಾರಿ ಜೈಲಿನ ಬಳಿ ಬಂದಿದ್ದ ಮಹಿಳೆಯ ಹೈಡ್ರಾಮದ ಹೈಲೈಟ್ ಇದು.
ರೇಣುಕಾಸ್ವಾಮಿ ಕೊಲೆ ಪ್ರಕರಣ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಬಳಿಕ ದರ್ಶನ್ ಗ್ಯಾಂಗ್ ತಮ್ಮದೇ ಆದ ಚಿಂತೆಯಲ್ಲಿದ್ದೆ, ಜೈಲಿನ ಬಳಿ ಬಂದಿದ್ದ ಗುಲ್ಬರ್ಗಾ ಮೂಲದ ಮಹಿಳೆ ಲಕ್ಷ್ಮೀ ಮಾತ್ರ ಚಿತ್ರ ವಿಚಿತ್ರ ಹೇಳಿಕೆ ಕೊಟ್ಟು ಕೆಲ ಕಾಲ ಅಲ್ಲಿದ್ದವರನ್ನು ಅಚ್ಚರಿಗೊಳಿಸಿದರು. ಸೇಬು, ದಾಳಿಂಬೆ ಹಾಗೂ ಇನ್ನಿತರೆ ಹಣ್ಣುಗಳನ್ನು ತಂದಿದ್ದ ಆಕೆ, ನಾನು ಒಳಗೆ ಹೋಗಲೇ ಬೇಕು. ದರ್ಶನ್‌ನನ್ನು ನೋಡಲೇಬೇಕು ಅಂತ ಹಠ ಹಿಡಿದರು.
ಪರಪ್ಪನ ಅಗ್ರಹಾರಕ್ಕೆ ಹೋಗಿದ್ದೆ ಅಲ್ಲೂ ಬಿಡಲಿಲ್ಲ. ಅವ್ರಿಗೆ ಚಿಕನ್, ಮಟನ್ ಬೇಕು ಅಂದ್ರೆ ಅದನ್ನೂ ಮಾಡಿಕೊಂಡು ಬರುತ್ತೇನೆ. ನನಗೆ ಸಣ್ಣಂದಿನಿಂದಲೂ ದರ್ಶನ್ ಅಂದ್ರೆ ಇಷ್ಟ. ದರ್ಶನ್‌ಗೆ ವಿಜಯಲಕ್ಷ್ಮೀ ಹೆಂಡ್ತಿ ಇದ್ದಾರೆ. ನಾನು ಕೂಡಾ ಅವ್ರನ್ನ ಮದ್ವೆಯಾಗಿ ಜತೆಯಾಗಿರ್ತೇನೆ ಅಂತ ಹೇಳಿದ್ರು. ಇಷ್ಟು ಮಾತ್ರವಲ್ಲದೆ ನನ್ನನ್ನು ಒಳಗೆ ಬಿಡಿ, ಅವ್ರ ಜತೆ ಮಾತಾಡಿ ಬರ್ತೇನೆ ಅಂತ ಜೈಲು ಸಿಬ್ಬಂದಿ ಜತೆಗೂ ವಾಗ್ವಾದಕ್ಕಿಳಿದ ಪ್ರಸಂಗವೂ ನಡೆಯಿತು.



