Friday, March 27, 2026
Homebig breakingರಾಜಧಾನಿಯಲ್ಲಿ ಮನುಷ್ಯನ ವಿಕೃತಿ - ಗೋಮಾತೆಯ ಕೆಚ್ಚಲು ಕೊಯ್ದ ಕಿರಾತಕರು

ರಾಜಧಾನಿಯಲ್ಲಿ ಮನುಷ್ಯನ ವಿಕೃತಿ – ಗೋಮಾತೆಯ ಕೆಚ್ಚಲು ಕೊಯ್ದ ಕಿರಾತಕರು

ಬೆಂಗಳೂರು : ಮೂಕ ಪ್ರಾಣಿಗಳ ಮೇಲೆ ಮನುಷ್ಯರು ವಿಕೃತಿ ಮೆರೆಯುತ್ತಿರುವ ಪ್ರಸಂಗಗಳು ಹೆಚ್ಚುತ್ತಲೇ ಇದೆ. ನಿನ್ನೆ ತಡ ರಾತ್ರಿ ಕಿಡಿಗೇಡಿಗಳು ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದಿರುವ ಅಮಾನವೀಯ ಘಟನೆ ಚಾಮರಾಜಪೇಟೆ ವಿನಾಯಕನಗರದಲ್ಲಿ ನಡೆದಿದೆ. ರಸ್ತೆಯಲ್ಲಿ ಮಲಗಿದ್ದ ಹಸುಗಳ ಕೆಚ್ಚಲನ್ನು ಕೊಯ್ದಿರುವ ಕಿರಾತಕರು ಪರಾರಿಯಾಗಿದ್ದು, ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಚಾಮರಾಜಪೇಚೆಯ ಕರ್ಣ ಎಂಬವರಿಗೆ ಸೇರಿದ ಹಸುಗಳು ಇದಾಗಿದ್ದು, ಒಟ್ಟು 8 ಹಸುಗಳಿದ್ದು ಈ ಪೈಕಿ ನಾಲ್ಕು ಹಸುಗಳು ಮನೆಯ ಪಕ್ಕದ ರಸ್ತೆಯಲ್ಲಿ ಮಲಗುತ್ತದೆ. ನಿನ್ನೆ ರಾತ್ರಿ ಮಲಗಿದ್ದ ಹಸುಗಳ ಮೇಲೆ ಈ ರೀತಿ ವಿಕೃತಿ ಮೆರೆದಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಕಾಟನ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ. ಸಂಸದ ಪಿ.ಸಿ. ಮೋಹನ್ ಕೂಡಾ ಭೇಟಿ ನೀಡಿದ್ದಾರೆ.
ಈ ಘಟನೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ಘಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಘಟನೆಯ ವರದಿ ತರಿಸಿಕೊಳ್ಳುತ್ತೇನೆ. ಯಾರು ತಪ್ಪು ಮಾಡಿದ್ದಾರೆ ಅಂತ ಪರಿಶೀಲಿಸಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!