ಉತ್ತರಕನ್ನಡ : ಆರೋಪಿ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ವಿಚಾರ ಬಯಲಾಗುತ್ತಿದ್ದಂತೆ ರಾಜ್ಯದಾದ್ಯಂತ ಎಲ್ಲಾ ಜೈಲುಗಳು ಅತ್ಯಂತ ಕಠಿಣ ಶಿಸ್ತಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಹಾಗಾಗಿ ರಾಜ್ಯ ಬಹುತೇಕ ಜೈಲುಗಳಲ್ಲಿ ಕೈದಿಗಳ ಸ್ಥಿತಿ ಹೇಳ ತೀರದಾಗಿದೆ. ಇಷ್ಟು ದಿನ ಜಾಲಿಯಾಗಿರುತ್ತಿದ್ದ ಕೈದಿಗಳು ಇದೀಗ ಕಂಗಾಲಾಗಿದ್ದಾರೆ.

ಕಾರವಾರದಲ್ಲಿ ಕೈದಿಗಳು ಇದೀಗ ಜಡ್ಜ್ ಮುಂದೆ ಮನವಿಯೊಂದನ್ನು ಮಾಡಿದ್ದು ನಮಗೆ ತಂಬಾಕು ನೀಡಲು ವ್ಯವಸ್ಥೆ ಮಾಡಿ. ತಂಬಾಕು ಇಲ್ಲದಿದ್ದರೆ ಜೈಲಲ್ಲಿ ನಮಗೆ ಇರೋಕೆ ಕಷ್ಟ ಆಗುತ್ತೆ. ಹಾಗಾಗಿ ನಮಗೆ ತುಂಬಾಕು ನೀಡಿ ಅಂತಾ ಕಾರವಾರದ ಸಿಜೆ ಕೋರ್ಟ್ ನ ನ್ಯಾಯಾಧೀಶರ ಎದುರು ತಮ್ಮ ಗೋಳು ತೋಡಿಕೊಂಡಿದ್ದಾರೆ.

ಆಗಸ್ಟ್ 29 ರಂದು ತಂಬಾಕಿಗಾಗಿ ಕೈದಿಗಳು ಧರಣಿ ಮಾಡಿದ್ದರು. ಸುಮಾರು 20 ಕೈದಿಗಳು ಗಲಾಟೆ ಮಾಡಿದ್ದರು.ಕೇವಲ ಕಾರವಾರ ಅಷ್ಟೆ ಅಲ್ಲದೆ ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಜೈಲಿನಲ್ಲಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ. ಬೀಡಿ ಸಿಗುತ್ತಿಲ್ಲ ಎಂದು ಕೈದಿಗಳು ಪಟ್ಟು ಹಿಡಿದಿದ್ದಾರೆ.ಸೋಗಾನೆ ಬಳಿ ಇರುವ ಕೇಂದ್ರ ಕಾರಗೃಹದಲ್ಲಿಯೂ ದರ್ಶನ್ ಪ್ರಕರಣದ ನಂತರ ಜೈಲು ವ್ಯವಸ್ಥೆಯನ್ನು ಕಠಿಣ ಮಾಡಲಾಗಿದೆ. ಹೀಗಾಗಿ ಇದೀಗ ಬೀಡಿ ನೀಡದ ಹಿನ್ನೆಲೆಯಲ್ಲಿ ಕೈದಿಗಳು ಬೀಡಿ ನೀಡಲು ಆಗ್ರಹಿಸುತ್ತಿದ್ದಾರೆ.
