ಅತ್ಯಾಚಾರ ಆರೋಪ ಎದುರಿಸುತ್ತಿರುವ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡರಿಗೆ ಇವತ್ತು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. JMFC ಕೋರ್ಟ್ ಮೇ 24ರ ವರೆಗೂ ನ್ಯಾಯಾಂಗ ಬಂಧನ ವಿಧಿಸಿದೆ .ಹೀಗಾಗಿ ಇವತ್ತೇ ದೇವರಾಜೇಗೌಡರ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.
ದೇವರಾಜೇಗೌಡರ ಪೊಲೀಸ್ ಕಸ್ಟಡಿ ಇವತ್ತು ಅಂತ್ಯಗೊಂಡಿದ್ದು ಹೊಳೆನರಸೀಪುರ ನಗರ ಠಾಣೆ ಪೊಲೀಸರು ಹಾಸನ ಜಿಲ್ಲಾ ಕಾರಾಗೃಹಕ್ಕೆ ಹಸ್ತಾಂತರ ಮಾಡಿದ್ದಾರೆ.ಜೈಲಿಗೆ ಹೋಗುವ ಮುನ್ನ ಮಾಧ್ಯಮ ಪ್ರತಿನಿಧಿಗಳು ದೇವರಾಜೇಗೌಡರನ್ನು ನಿಮ್ಮ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರ ಏನಾದರೂ ಇದೆಯಾ ಅಂತ ಪ್ರಶ್ನೆ ಕೇಳಿದಾಗ ಉತ್ತರಿಸಿದ ದೇವರಾಜೇ ಗೌಡರು ಈ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಳ್ಳಲಿ, ಈಗ ಪೊಲೀಸ್ ಕಸ್ಟಡಿ ಮುಗಿದಿದೆ. ಜಾಮೀನಿಗೆ ಅರ್ಜಿ ಹಾಕುತ್ತಿದ್ದೇವೆ. ಬೇಗ ಎಲ್ಲ ಸತ್ಯ ಹೊರಗೆ ಬರುತ್ತದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಸತ್ಯ ಧರ್ಮದ ಪರ ಹೋರಾಟ ಮಾಡುವ ನಾಯಕ ನಾನು, ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ , ಧೈರ್ಯವಾಗಿರಿ ಎಂದು ಹೇಳಿದರು. ಅಲ್ಲದೆ ಯಾವ ಷಡ್ಯಂತ್ರ ಇದ್ರೂ, ಯಾರು ಏನೂ ಮಾಡುವುದಕ್ಕೆ ಆಗಲ್ಲ.ಕಾನೂನಿನ ಮುಂದೆ ಎಲ್ಲರೂ ತಲೆಬಾಗಲೇಬೇಕು. ಸತ್ಯಕ್ಕೆ ಜಯವಿದೆ. ಸತ್ಯ ಮುಂದೆ ಹೊರ ಬರುತ್ತದೆ ಎಂದು ಹೇಳಿ ಕಾರಾಗೃಹಕ್ಕೆ ಹೋದರು.
ಘಟನೆಯ ವಿವರ
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಹಿಳೆಯೊಬ್ಬರು ಆಸ್ತಿ ಮಾರಾಟ ಮಾಡಲು ಸಹಾಯ ಮಾಡುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಮಾಡಿ ಏಪ್ರಿಲ್ ೧ ಕ್ಕೆ ಹೊಳೆನರಸೀಪುರದಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಮುಖ೦ಡ, ವಕೀಲ ದೇವರಾಜೆಗೌಡಗೆ ನ್ಯಾಯಾಲಯ ಇವತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.