ಚಿಕ್ಕಮಗಳೂರು: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಒಂಬತ್ತು ಜಾನುವಾರುಗಳನ್ನು ಹಿಂದೂ ಕಾರ್ಯಕರ್ತರು ರಕ್ಷಿಸಿದ ಘಟನೆ ಕೊಪ್ಪ ತಾಲೂಕಿನ ಹರಿಹರಪುರ ಬಳಿ ನಡೆದಿದೆ.
ಮೂವರ ವಿರುದ್ದ ಹರಿಹರಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ನಿಲುವಾಗಿಲು ಗ್ರಾಮದ ತಿಮ್ಮಪ್ಪ ಎಂಬುವವರ ಮನೆಯಿಂದ ಒಂಬತ್ತು ಹಸುಗಳನ್ನು ಸರಕು ಸಾಗಣೆ ವಾಹನದಲ್ಲಿ ತುರುವೆಕೆರೆಗೆ ಸಾಗಿಸುತ್ತಿದ್ದ ವೇಳೆ ಪೊಲೀಸರು ಕಾಳನಾಯಕನ ಕಟ್ಟೆ ಬಳಿ ದಾಳಿ ನಡೆಸಿ ವಾಹನ, ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾನೂನು ಬಾಹಿರವಾಗಿ ಒಂಬತ್ತು ಹಸುಗಳನ್ನು ಸಾಗಣೆ ಮಾಡಿದ ಕಾರಣ ನಿಲುವಾಗಿಲಿನ ತಿಮ್ಮಪ್ಪ, ತುರುವೆಕೆರೆ ರಮೇಶ್ ಹಾಗೂ ರಘು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.