ಚಿಕ್ಕಮಗಳೂರು: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವನ್ನಪ್ಪಿದ ಘಟನೆ ಬಾಳೆಹೊನ್ನೂರು ಸಮೀಪದ ಸಿಗೋಡು ಗ್ರಾಮದಲ್ಲಿ ನಡೆದಿದೆ. ಮಹಾದೇವ್ (30) ಲೈನ್ ಮ್ಯಾನ್.ಮಹಾದೇವ್ ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದವರು. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿಗೆ ನಾಲ್ವರು ಲೈನ್ ಮ್ಯಾನ್ ಹಾಗೂ ಅಧಿಕಾರಿಗಳು ರಿಪೇರಿಗೆ ತೆರಳಿದ್ದರು. ಈ ವೇಳೆ ಟಾನ್ಸ್ ಫಾರ್ಮರ್ ರಿಪೇರಿ ಮಾಡುವಾಗ ಏಕಾಏಕಿ ವಿದ್ಯುತ್ ಸಂಚರಿಸಿ ಮಹಾದೇವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.