ಚಿಕ್ಕಮಗಳೂರು : ಅಪ್ರಾಪ್ತ ಬಾಲಕನೊಬ್ಬ ಸಾರ್ವಜನಿಕ ಸ್ಥಳದಲ್ಲಿ ವ್ಹೀಲಿಂಗ್ ಮಾಡಿದ ಪ್ರಕರಣದಲ್ಲಿ ತಂದೆ ಮೇಲೆ ಕೇಸ್ ಹಾಕಿದ ಘಟನೆ ಚಿಕ್ಕಮಗಳೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಂಡುಬಂದಿದೆ.

ಹೌದು ..ನಗರದ ಫಾರೆಸ್ಟ್ ಗೇಟ್ ಬಳಿ ವ್ಹೀಲಿಂಗ್ ಮಾಡಿದ್ದ ಬಾಲಕ.. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಹೀಲಿಂಗ್ ನಡೆಸಿದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದ್ವಿಚಕ್ರ ವಾಹನವನ್ನು ನೋಂದಣಿಯು ಆತನ ತಂದೆಯ ಹೆಸರಿನಲ್ಲಿ ಇದ್ದುದ್ದರಿಂದ ಬಾಲಕನ ತಂದೆಯ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡಲಾಗಿದೆ.
ಹಾಗೆ ಚಿಕ್ಕಮಗಳೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೈಕು ಮತ್ತು ಆರ್ ಸಿ ಬುಕ್ಕನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ