SIT ಅಧಿಕಾರಿಗಳು ನೋಟೀಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮಂಗಳವಾರ (ಮೇ 14 ಕ್ಕೆ) SIT ಅಧಿಕಾರಿಗಳು ದಾಳಿ ಮಾಡಿದ ಎಲ್ಲಾ ಕಚೇರಿಗಳು, ಮನೆಗಳು ಪ್ರೀತಮ್ ಗೌಡರ ಆಪ್ತವಲಯದ್ದಾಗಿದೆ.
ಪೆನ್ ಡ್ರೈವ್ ಕೇಸ್ ಬಗ್ಗೆ ನಿನ್ನೆಯಷ್ಟೇ ಪ್ರೀತಮ್ ಗೌಡರ ಆಪ್ತರಾದ ಶರತ್ ಮತ್ತು ಕಿರಣ್ ರನ್ನು SIT ಅಧಿಕಾರಿಗಳು ಅರೆಸ್ಟ್ ಮಾಡಿದ್ದು , ಇವರ ಮನೆ, ಕಚೇರಿ, ಹೋಟೆಲ್ ಮತ್ತು ಬಾರ್ ಗಳ ಮೇಲೆ ದಾಳಿ ಮಾಡಿ ತನಿಖೆಯನ್ನು ಮಾಡುತ್ತಿದ್ದಾರೆ. ಶರತ್ ಒಡೆತನದ ಕ್ವಾಲಿಟಿ ಬಾರ್ ಹಾಗೂ ಕಿರಣ್ ಒಡೆತನದ ಹೋಟೆಲ್ ಮೇಲೆ ದಾಳಿ ಮಾಡಿ ಪರಿಶೀಲಿಸಲಾಗಿದೆ. ಹಾಗೆ ಕಚೇರಿಯಲ್ಲಿ ಕೆಲವು ಪೆನ್ ಡ್ರೈವ್ ಪತ್ತೆಯಾಗಿದೆ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ.
ನಿನ್ನೆಯಷ್ಟೇ ಹಾಸನದ ಬಿ.ಎಂ.ರಸ್ತೆಯಲ್ಲಿರುವ ಕ್ವಾಲಿಟಿ ಬಾರ್ ಹಾಗೂ ಹೋಟೆಲ್ ಶ್ರೀಕೃಷ್ಣ ಮೇಲೆ ಎಸ್‌ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಪೆನ್ ಡ್ರೈವ್ ಹಂಚಿಕೆ ಆರೋಪದಲ್ಲಿ ಕ್ವಾಲಿಟಿ ಬಾರ್ ಶರತ್ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಏ.21 ರಂದು ಜೆಡಿಎಸ್ ಮುಖಂಡರು ದೂರು ದಾಖಲಿಸಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗೆ ಆರೋಪಿ ಶರತ್ ಅರ್ಜಿ ಸಲ್ಲಿಸಿದ್ದರು. ಆದರೆ ಇವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಇನ್ನು ಮತ್ತೊಬ್ಬ ಆರೋಪಿ, ಉದ್ಯಮಿ ಕಿರಣ್ ಕೂಡ ಪ್ರೀತಮ್ ಗೌಡಗೆ ಬಹಳ ಆಪ್ತರಾಗಿದ್ದು, ಇವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ , ಹಾಸನ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು ಎನ್ನಲಾಗಿದೆ.
ಇನ್ನು ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಮನೆ ಮೇಲೆ ಕೂಡ ಮೇ 14 ಕ್ಕೆ ಎಸ್‌ಐಟಿ ದಾಳಿ ನಡೆಸಿತ್ತು. ಹಾಸನದ ರವೀಂದ್ರ ನಗರದಲ್ಲಿರುವ ದೇವರಾಜೇಗೌಡ ಮನೆ, ಕಚೇರಿಯಲ್ಲಿ ಎಸ್‌ಐಟಿ ಶೋಧ ನಡೆಸಿದ್ದು, ಒಂದೇ ದಿನ ಒಟ್ಟು 6 ಕಡೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ಅಶ್ಲೀಲ ವಿಡಿಯೋ ವೈರಲ್ ಮಾಡಿದ ಆರೋಪದಲ್ಲಿ ಮೇ 12ರಂದು ಲಿಖಿತ್ ಗೌಡ ಹಾಗೂ ಚೇತನ್ ಎಂಬುವವರನ್ನು ಎಸ್‌ಐಟಿ ಬಂಧಿಸಿತ್ತು. ಇವರಿಬ್ಬರು ಕೂಡ ಪ್ರೀತಂ ಗೌಡರಿಗೆ ಆತ್ಮೀಯರಾಗಿದ್ರು. ಇಬ್ಬರಿಗೂ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು . ಹೀಗಾಗಿ ಇಬ್ಬರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು, ಆದರೆ ಹಾಸನದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ಇಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ . ಹೀಗಾಗಿ ಲಿಖಿತ್ ಮತ್ತು ಚೇತನ್ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ.