Chikkamagaluru; ದಾಖಲೆ ಇಲ್ಲದೇ ಸಾಗಿಸುತ್ತಿದ್ದ 18 ಚಿನ್ನದ ಉಂಗುರಗಳನ್ನು ವಸ್ತಾರೆ ಪೊಲೀಸ್ ಜಂಕ್ಷನ್ ನಲ್ಲಿ ವಶ ಪಡಿಸಿಕೊಳ್ಳಲಾಗಿದೆ. ಲೋಕಸಭೆ ಚುನಾವಣೆ ಹಿನ್ನಲೆ ಚೆಕ್ ಪೋಸ್ಟ್ ಬಳಿ ಎಲ್ಲಾ ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ವಸ್ತಾರೆ ಪೊಲೀಸ್ ಜಂಕ್ಷನ್ ಬಳಿ ಬಲೆನೋ ಕಾರಿನಲ್ಲಿ ಸಾಗಿಸುತ್ತಿದ್ದ 18 ಚಿನ್ನದ ಉಂಗುರಗಳನ್ನು ಅಂದರೆ 90 ಗ್ರಾಂ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿರುವಂತೆ ಜಿಲ್ಲೆಯ ಆಂತರಿಕ ಭದ್ರತೆ ನಿಟ್ಟಿನಲ್ಲಿ ತಾಲೂಕ ತಾಲೂಕು ಮಧ್ಯೆ ಸಹಾ ಜಂಕ್ಷನ್ ಪಾಯಿಂಟ್ ಗಳನ್ನು ತೆರೆಯಲಾಗಿದ್ದು . ಚಿಕ್ಕಮಗಳೂರು ನಗರದ ವಿಜಯಪುರದ ಚಿನ್ನದ ವ್ಯಾಪಾರಿ ಒಬ್ಬರು ಗಟ್ಟಿ ಖರೀದಿಸಿ ಅದರಿಂದ ಉಂಗುರಗಳನ್ನು ತಯಾರಿಸಿ ಉಡುಪಿಯ ಜ್ಯುವೆಲರಿ ಅಂಗಡಿ ಮಾಲೀಕರಿಗೆ ಕೊಡಲು ತೆಗೆದುಕೊಂಡು ಹೋಗುವ ವೇಳೆ ತಪಾಸಣೆ ನಡೆಸಿದ ಪೊಲೀಸರು ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

