ಹಾಸನ ಪೆನ್‌ಡ್ರೈವ್ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಇವತ್ತೂ ಕೂಡಾ ಬೆಂಗಳೂರಿಗೆ ಬರುವುದು ಡೌಟೇ. ಯಾಕಂದ್ರೆ ಪ್ರಜ್ವಲ್ ಬುಕ್ ಮಾಡಿದ್ದ ಫ್ಲೈಟ್ ಟಿಕೆಟ್ ಮತ್ತೆ ಕ್ಯಾನ್ಸಲ್ ಆಗಿದೆ.
ಪ್ರಜ್ವಲ್ ಜರ್ಮನ್‌ನ ಮ್ಯೂನಿಚ್‌ನಿಂದ ಬೆಂಗಳೂರಿಗೆ ಇವತ್ತು ಫ್ಲೈಟ್ ಟಿಕೆಟ್ ಬುಕ್ ಮಾಡಿದ್ರು. ಇದರಂತೆ ಇಂದು ಪ್ರಜ್ವಲ್ ಬೆಂಗಳೂರಿಗೆ ಬರಬೇಕಿತ್ತು. ಆದರೆ, ಮತ್ತೆ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಲುಪ್ತಾನ್ಸಾ ವಿಮಾನದಲ್ಲಿ ಬುಕ್ ಆಗಿದ್ದ ಟಿಕೆಟ್ ಅನ್ನು ನಾಲ್ಕು ದಿನಗಳ ಹಿಂದೆಯೇ ರದ್ದು ಮಾಡಿದ್ದಾರೆನ್ನಲಾಗಿದೆ. ಇಂದು ಮ್ಯೂನಿಚ್ ನಿಂದ 3:30ಕ್ಕೆ ಹೊರಡಲಿರುವ ವಿಮಾನ ಮಧ್ಯರಾತ್ರಿ 12:30ಕ್ಕೆ ಬೆಂಗಳೂರು ತಲುಪಲಿದೆ. ಇನ್ನು ಟಿಕೆಟ್ ಕ್ಯಾನ್ಸಲ್ ಆದ್ರೂ ಪ್ರಜ್ವಲ್ ಹಣ ವಾಪಸ್ ಪಡೆದಿಲ್ಲ. ಇದುವರೆಗೂ ನಾಲ್ಕು ಬಾರಿ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ.
ತಂದೆ ಹೆಚ್.ಡಿ.ರೇವಣ್ಣಗೆ ಬೇಕ್ ಸಿಕ್ಕ ಹಿನ್ನೆಲೆ ಪ್ರಜ್ವಲ್ ರೇವಣ್ಣ ಬರಬಹುದು ಎಂಬ ನಿರೀಕ್ಷೆ ಇತ್ತು. ಎಸ್ಐಟಿ ಅಧಿಕಾರಿಗಳು ಕೂಡಾ ಪ್ರಜ್ವಲ್ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಕೆಲ ಮೂಲಗಳ ಪ್ರಕಾರ ಜೂನ್ 4ರ ನಂತರ ಅಂದ್ರೆ ಲೋಕಸಭೆ ಚುನಾವಣೆ ಫಲಿತಾಂಶದ ನಂತರವೇ ಪ್ರಜ್ವಲ್ ಭಾರತಕ್ಕೆ ಬರಬಹುದು ಎಂದು ತಿಳಿದುಬಂದಿದೆ.