ಬೆಂಗಳೂರು: ಕೆ.ಆರ್.ನಗರ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಜೀವನ ಶೈಲಿ ಇಂದಿನಿಂದ ಬದಲಾಗಲಿದೆ. ಕಳೆದ 14 ತಿಂಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ್ದು, ನಿನ್ನೆಯಿಂದಲೇ ಅಧಿಕೃತವಾಗಿ ಸಜಾಬಂಧಿ ಖೈದಿಯಾಗಿದ್ದಾರೆ.

ಸದ್ಯ ಪ್ರಜ್ವಲ್ ರೇವಣ್ಣಗೆ 15528 ನಂಬರ್ ನೀಡಲಾಗಿದ್ದು, ಇಂದು (ಆಗಸ್ಟ್ 02) ಪ್ರಜ್ವಲ್ ರೇವಣ್ಣಗೆ ಜೈಲು ಸಿಬ್ಬಂದಿ ಬಿಳಿ ವಸ್ತ್ರ ನೀಡಲಿದ್ದು, ಜೈಲು ನಿಯಮಾವಳಿ ಅನುಸಾರ ಜೈಲು ಆಧೀಕ್ಷಕರು ನೀಡುವ ಕೆಲಸ ಮಾಡಿಕೊಂಡಿರಬೇಕು

ಪ್ರಜ್ವಲ್ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳ ಕೂಡ ಪಾವತಿ ಮಾಡಲಾಗುತ್ತೆ. ಮೊದಲು ಒಂದು ವರ್ಷ ಕೌಶಲ್ಯ ರಹಿತ ಅಂತ 524 ರೂಪಾಯಿ ಸಂಬಳ ನೀಡಲಾಗುತ್ತೆ. ಆಮೇಲೆ ಅರೆ ಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಬಡ್ತಿ ನೀಡಲಾಗುತ್ತೆ. ಹೀಗೆ ಸಜಾಬಂಧಿ ಖೈದಿಯಾದ ಕಾರಣ ಪ್ರಜ್ವಲ್ ಜೀವನ ಶೈಲಿ ಸಂಪೂರ್ಣ ಬದಲಾಗಲಿದೆ.
ಕೆ.ಆರ್ ನಗರ ರೇಪ್ ಕೇಸ್‌ನಲ್ಲಿ ಪ್ರಜ್ವಲ್ ಬಂಧನವಾಗಿಲ್ಲ. ಕೇವಲ ಬಾಡಿ ವಾರಂಟ್ ಮೇಲೆ ಪ್ರಜ್ವಲ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಹೀಗಾಗಿ ಜೀವ ಇರೋವರೆಗೂ, ಬದುಕಿರೋವರೆಗೂ ಪ್ರಜ್ವಲ್ ಜೈಲಿನಲ್ಲೇ ಇರಬೇಕಾಗಿದೆ.