Tuesday, February 24, 2026
Homeಕ್ರೈಮ್ಚಿಕ್ಕಮಗಳೂರು: ಕಾಡಾನೆ ದಾಳಿ ಮಹಿಳೆ ಬಲಿ ಪ್ರತಿಭಟನೆ ಪ್ರಕರಣ: ಬಾಳೆಹೊನ್ನೂರು ಠಾಣೆಯಲ್ಲಿ 2 ಪ್ರತ್ಯೇಕ...

ಚಿಕ್ಕಮಗಳೂರು: ಕಾಡಾನೆ ದಾಳಿ ಮಹಿಳೆ ಬಲಿ ಪ್ರತಿಭಟನೆ ಪ್ರಕರಣ: ಬಾಳೆಹೊನ್ನೂರು ಠಾಣೆಯಲ್ಲಿ 2 ಪ್ರತ್ಯೇಕ FIR ದಾಖಲು

ಚಿಕ್ಕಮಗಳೂರು: ಕಾಡಾನೆ ದಾಳಿ ಮಹಿಳೆ ಬಲಿ ಪ್ರತಿಭಟನೆ ಪ್ರಕರಣ ಹಾಗೂ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್‌ ಬಾಳೆಹೊನ್ನೂರು ಠಾಣೆಯಲ್ಲಿ 2 ಪ್ರತ್ಯೇಕ FIR ದಾಖಲು ಮಾಡಲಾgiದೆ.

ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಶವವನ್ನು ರಾಜ್ಯ ಹೆದ್ದಾರಿಯಲ್ಲಿ ಇಟ್ಟುಕೊಂಡು ಬೆಳಗ್ಗೆಯಿಂದ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಪ್ರತಿಭಟನೆ ನಡೆಸಿದ 29ಕ್ಕೂ ಅಧಿಕ ಜನರ ಮೇಲೆ ‌ಸುಮೋಟೋ ಕೇಸ್ ದಾಖಲಿಸಲಾಗಿದೆ.

ಚಿಕ್ಕಮಗಳೂರು: ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಚ್‌ ಖಂಡಿಸಿ ಶೃಂಗೇರಿ ಕ್ಷೇತ್ರ ಬಂದ್

ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಿದ್ದು 10ಕ್ಕೂ ಅಧಿಕ ಪೊಲೀಸರಿಗೆ ಗಾಯ ಎಂದು FIR ನಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗೆ ಕಲ್ಲು ತೂರಾಟದಿಂದ‌ ಪೊಲೀಸ್ ಸಿಬ್ಬಂದಿಗಳಿಗೆ ಗಾಯ ಆಕ್ರೋಶಗೊಂಡ ಹೋರಾಟಗಾರರಿಂದ ರಸ್ತೆ ತಡೆ, ಪೊಲೀಸರ ಮೇಲೆ ಕಲ್ಲು ತೂರಾಟ ಎಂದು ಸುಮೋಟೋ ಕೇಸ್DAR ವಾಹನ ಪಲ್ಟಿ ಮಾಡಲು ಯತ್ನ ಎಂದು ಉಲ್ಲೇಖಿಸಿ BNS 353(b) ,195,57,132,126(2),191(2)190 ಸೆಕ್ಷನ್ ಅಡಿ ಬಾಳೆಹೊನ್ನೂರು PSI ಅಂಬರೀಶ್ ‌ಅವರಿಂದ ದೂರು ದಾಖಲಿಸಲಾಗಿದೆ.

ಕಾಡಾನೆ ದಾಳಿಗೆ ಮಹಿಳೆ‌ ಸಂಬಂಧ UDR ದಾಖಲು ಮಾಡಿದ್ದು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಚಂದ್ರಶೇಖರ್ ರೈ, ಅಭಿಷೇಕ್, ಮಂಜು ಪ್ರವೀಣ್ ಖಾಂಡ್ಯ, ಆದರ್ಶ, ಕಾರ್ತಿಕ್ ಸೇರಿ 29 ಜನರು ಮತ್ತು ಇತರರ ಮೇಲೆ ಕೇಸ್‌ ದಾಖಲಿಸಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಬಳಿ ಭಾನುವಾರ ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಶವವನ್ನು ರಾಜ್ಯ ಹೆದ್ದಾರಿಯಲ್ಲಿ ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!