ಬೆಳ್ತಂಗಡಿ; ತಾಲೂಕಿನ ಬೇಳಾಲಿನಲ್ಲಿ ನಡೆದ ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲಾಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಮಗಳು ವಿಜಯಲಕ್ಷ್ಮೀ ಅವರ ಗಂಡ ರಾಘವೇಂದ್ರ ಕೆದಿಲಾಯ(53) ಮತ್ತು ಮಗಳ ಮೊಮ್ಮಗ ಮುರಳಿಕೃಷ್ಣ(20) ಬಂಧಿತ ಆರೋಪಿಗಳು.
ಬಾಲಕೃಷ್ಣ ಬಡೆಕ್ಕಿಲ್ಲಾಯ ಮಗಳಿಗೆ ತನ್ನ ಪತ್ನಿ ವೃತ್ತ ಶಿಕ್ಷಕಿ ದಿ.ಯು.ಲೀಲಾ ಅವರ ಚಿನ್ನ ಹಾಗೂ ಆಸ್ತಿಯಲ್ಲಿ ಪಾಲು ನೀಡಿರಲಿಲ್ಲ, ಇದೇ ಕೋಪಕ್ಕೆ ಅಳಿಯ ರಾಘವೇಂದ್ರ ಕೆದಿಲಾಯ ಮತ್ತು ಮೊಮ್ಮಗ ಮುರಳಿಕೃಷ್ಣ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರನ್ನು ಕೊಲೆ ಮಾಡಿದ್ದಾರೆ. ಹಂತಕರಿಬ್ಬರನ್ನು ಕೂಡ ಧರ್ಮಸ್ಥಳ ಪೊಲೀಸರು ಕಾಸರಗೋಡಿನ ಬದಿಯಡ್ಕದ ಅವರ ಮನೆಯಲ್ಲಿ ಬಂಧಿಸಿದ್ದಾರೆ.