ಬೆಂಗಳೂರು : ನಿನ್ನೆ ರಾತ್ರಿ (ಮೇ 12) ಕ್ಕೆ ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕಗ್ಗಲಿಪುರದಿಂದ ಬೆಂಗಳೂರಿಗೆ ಬರುತ್ತಿರುವಾಗ 20ಕ್ಕೂ ಹೆಚ್ಚು ಪುಂಡರು ನಟ ಚೇತನ್ ಚಂದ್ರ ಮೇಲೆ ದಾಳಿ ಮಾಡಿದ್ದಾರೆ. ನಿನ್ನೆ ರಾತ್ರಿಯೇ Insta live ನಲ್ಲಿ ಬಂದು ಘಟನೆ ಬಗ್ಗೆ ಚೇತನ್ ಹೇಳಿಕೊ೦ಡಿದ್ದಾರೆ..
ನನ್ನ ಮೇಲೆ ಹಲ್ಲೆ ನಡೆದಿರುವುದು ನನ್ನ ಜೀವನದಲ್ಲಾದ ಕೆಟ್ಟ ಅನುಭವ ಎಂದು ಕಣ್ಣೀರು ಹಾಕಿದ್ದಾರೆ. ಕಗ್ಗಲೀಪುರದ ಟೋಲ್ ಬಳಿಯಿಂದ ದುಷ್ಕರ್ಮಿಗಳು ಬೈಕ್ ನಲ್ಲಿ ಫಾಲೋ ಮಾಡಿಕೊಂಡು ಬಂದು ಕಂಠಪೂರ್ತಿ ಕುಡಿದು, ಕಾರ್ ಅಡ್ಡ ಹಾಕಿ ಮನಸೋ ಇಚ್ಛೆ ಹೊಡೆದಿದ್ದಾರೆ ಅಂತ ಚೇತನ್ ಆರೋಪ ಮಾಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಅಂತ ಆರೋಪಿಸಿದ್ದಾರೆ. ಘಟನೆ ಸಂದರ್ಭ ಚೇತನ್ ಜೊತೆ ಕಾರಿನಲ್ಲಿ ಮೇಕ್ ಅಪ್ ಮ್ಯಾನ್ ಲಕ್ಷ್ಮಣ್ ಕೂಡ ಜೊತೆಯಲ್ಲಿಯೇ ಇದ್ದರು.
ಯಾಕೆ ಚೇಸ್ ಮಾಡುತ್ತಿದ್ದೀರಾ? ಏನಾಯ್ತು ಅಂತ ಮಾತಾಡುತ್ತ ಇರಬೇಕಾದರೆ , ಸಡನ್ ಆಗಿ ೨೦ ಜನರ ಗುಂಪು ಬಂದು ನನ್ನ ಮೇಲೆ ಅಟ್ಯಾಕ್ ಮಾಡಿದೆ . ಈ ವೇಳೆ ನನ್ನ ಚಿನ್ನದ ಸರವನ್ನ ಆರೋಪಿಗಳು ಕಿತ್ತುಕೊಂಡಿದ್ದಾರೆ. ಅಲ್ಲದೆ ಮೇಕ್ ಅಪ್ ಮ್ಯಾನ್ ನ ಮೊಬೈಲ್ ನ್ನೂ ಕಿತ್ತುಕೊಂಡಿದ್ದಾರೆ . ಒಂದೂವರೆ ಕಿ. ಮೀ.ನಿಂದ ನನ್ನನ್ನು ಚೇಸ್ ಮಾಡಿಕೊಂಡು ಬಂದು ಉದ್ದೇಶಪೂರ್ವಕವಾಗಿಯೇ ಹಲ್ಲೆ ಮಾಡಿದ್ದಾರೆ ಅಂತ ಚೇತನ್ ಆರೋಪಿಸಿದ್ದಾರೆ.
ನಿನ್ನೆ ಮದರ್ಸ್ ಡೇ ಹಿನ್ನೆಲೆ, ನನ್ನ ತಾಯಿಯನ್ನು ಕನಕಪುರದ ಹತ್ತಿರ ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿದ್ದೆ. ನಂತರ ತಾಯಿಯನ್ನು ಮನೆಗೆ ಬಿಟ್ಟು ಬರುವಾಗ ಕುಡುಕರು , ಏಕಾಏಕಿ ದಾಳಿ ಮಾಡಿ ರಕ್ತ ಬರೋ ಹಾಗೇ ಹಲ್ಲೆ ಮಾಡಿದ್ದಾರೆ ಅಂತ ಚೇತನ್ ಆರೋಪಿಸಿದ್ದಾರೆ. ಸದ್ಯ ಚೇತನ್ ಕಗ್ಗಲಿಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದೆ.