ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಿಂದ ತನ್ನ ಸಹ ಕೈದಿ ರೌಡಿಶೀಟರ್ ಜನಾರ್ದನ್ ಮೊಬೈಲ್ ನಿಂದ ಆತನ ಪುತ್ರನ ಜೊತೆ ನಟ ದರ್ಶನ್ ವೀಡಿಯೋ ಕಾಲ್ ನಲ್ಲಿ ಮಾತನಾಡಿದ ವೀಡಿಯೋ ವೈರಲ್ ಆದ ಬೆನ್ನಲ್ಲೇ ರೌಡಿ ಶೀಟರ್ ಜನಾರ್ಧನ್ ಪುತ್ರ ಸತ್ಯ ಇದೀಗ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೌಡಿ ಶೀಟರ್ ಧರ್ಮ ಜೊತೆ ವಿಡಿಯೋ ಕಾಲ್ ಮಾಡುವಾಗ ಸತ್ಯ ನಟ ದರ್ಶನ್ ಜೊತೆ ಕೂಡ ಮಾತನಾಡಿದ್ದನು. ಹಿನ್ನೆಲೆ ಆತನನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದರು. ಆದರೆ ಸತ್ಯ ಪರಾರಿಯಾಗಿದ್ದ. ಬಳಿಕ ಇದೀಗ ಆತನನ್ನು ಬಂಧಿಸಲಾಗಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 7 ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಆದೇಶ ನೀಡಿದ್ದಾರೆ.