Monday, February 9, 2026
Homeಕ್ರೈಮ್ಶಿವಮೊಗ್ಗ: ಬೈಕ್ - ಕಾರಿನ ನಡುವೆ ಡಿಕ್ಕಿ: ಮದುವೆ ನಿಶ್ಚಯವಾಗಿದ್ದ ಜೋಡಿ ದುರ್ಮರಣ!

ಶಿವಮೊಗ್ಗ: ಬೈಕ್ – ಕಾರಿನ ನಡುವೆ ಡಿಕ್ಕಿ: ಮದುವೆ ನಿಶ್ಚಯವಾಗಿದ್ದ ಜೋಡಿ ದುರ್ಮರಣ!

ಶಿವಮೊಗ್ಗ: ಬೈಕ್ ಮತ್ತು  ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮದುವೆ ನಿಶ್ಚಯವಾಗಿದ್ದ ಜೋಡಿ ಸಾವನ್ನಪ್ಪಿದ ಘಟನೆ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಬಳಿ ನಡೆದಿದೆ.

ಮೃತರನ್ನು ತಾಲೂಕಿನ ಮಟ್ಟಿಕೋಟೆ ಗ್ರಾಮದ ರೇಖಾ (20) ಮತ್ತು ತೊಗರ್ಸಿ ಸಮೀಪದ ಗಂಗೊಳ್ಳಿ ಗ್ರಾಮದ ನಿವಾಸಿ ಬಸವನಗೌಡ ದ್ಯಾಮನಗೌಡ್ರ (25) ಎಂದು ಗುರುತಿಸಲಾಗಿದೆ. ನಗರದ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುವವರನ್ನು ಶಿರಾಳಕೊಪ್ಪ ಕಡೆಯಿಂದ ಕರೆದೊಯ್ಯುತ್ತಿದ್ದ ಕಾರು ಮತ್ತು ಬಸವನಗೌಡ ಮತ್ತು ರೇಖಾ ಸಂಚರಿಸುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಕಾರಿನ ಮುಂಭಾಗ ತೀವ್ರ ಹಾನಿಗೊಳಗಾಗಿದೆ.

ರೇಖಾ, ಬಸವನಗೌಡ ಇಬ್ಬರಿಗೂ ಕಳೆದ ತಿಂಗಳು ಮದುವೆ ನಿಶ್ಚಿತಾರ್ಥ ನಡೆದಿತ್ತು. ಮಳೆ ಕಾರಣಕ್ಕೆ ಮದುವೆಯನ್ನು ಡಿಸೆಂಬರ್‌ಗೆ ನಿಗದಿ ಮಾಡಿದ್ದರು ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!