ಹಾಸನ; ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಶರತ್ ಒಡೆತನದ ಬಾರ್-ನಿವಾಸದ ಮೇಲೆ ಎಸ್ ಐ ಟಿ ತಂಡ ದಾಳಿ ಮಾಡಿದೆ.
ಪ್ರೀತಂಗೌಡ ಆಪ್ತ ಶರತ್ ಒಡೆತನದ ಹಾಸನದ ಬಿ ಎಂ ರಸ್ತೆಯಲ್ಲಿರುವ ಕ್ವಾಲಿಟಿ ಬಾರ್ ಹಾಗೂ ಹೋಟೆಲ್ ಶ್ರೀಕೃಷ್ಣ ಹಾಗೂ ಅವರ ಗೌರಿಕೊಪ್ಪಲಿನಲ್ಲಿರುವ ನಿವಾಸದ ಮೇಲೆ ಎಸ್ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಒಂದೇ ಒಂದೇ ದಿನ ಏಕ ಕಾಲದಲ್ಲಿ 6ಕ್ಕೂ ಹೆಚ್ಚು ಕಡೆ ದಾಳಿ ಮಾಡಿರುವ ಎಸ್ ಐಟಿ ತಂಡ ಇಂಚಿಂಚೂ ಮಾಹಿತಿ ಕಲೆ ಹಾಕಿದೆ.
ಬಾರ್ ಹಾಗೂ ಹೋಟೆಲ್‌ನಲ್ಲಿ ಪರಿಶೀಲಿಸುತ್ತಿರುವ ಎಸ್‌ಐಟಿ ಟೀಂಕಿರಣ್ ಒಡೆತನದ ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಹೋಟೆಲ್&ಬಾರ್ ಮೇಲೂ ಎಸ್ ಐ ಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಬಿಜೆಪಿ ಮುಖಂಡ ಪುನೀತ್ ಅವರ ವಿವೇಕ್ ನಗರದ ನಿವಾಸದ ಮೇಲೂ ಎಸ್ ಐ ಟಿ ದಾಳಿಯಾಗಿದೆ. ಹಾಸನದ ವಿವೇಕ ನಗರದಲ್ಲಿರೋ ಪುನೀತ್ ನಿವಾಸದದಲ್ಲಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈಗಾಗಲೇ ಮಹಿಳೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಜೈಲು ಸೇರಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ದೇವರಾಜೇಗೌಡ ಮನೆ-ಕಚೇರಿಯಲ್ಲೂ ಎಸ್ ಐ ಟಿ ಯಿಂದ ಪರಿಶೀಲನೆ ನಡೆದಿದೆ. ಹಾಸನದ ರವೀಂದ್ರ ನಗರದಲ್ಲಿರೋ ದೇವರಾಜೇಗೌಡ ಮನೆ ಮೇಲೆ ದಾಳಿ ಮಾಡಿದ ಎಸ್ ಐಟಿ ತಂಡ ಪೆನ್ ಡ್ರೈವ್ ಪ್ರಕರಣದ ಇಂಚಿಂಚೂ ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.