Saturday, February 7, 2026
Homeಕ್ರೈಮ್ಬೆಂಕಿ ಆರಿಸಲು ಹೋದ ರೈತ ಬೆಂಕಿಗಾಹುತಿ..!

ಬೆಂಕಿ ಆರಿಸಲು ಹೋದ ರೈತ ಬೆಂಕಿಗಾಹುತಿ..!

Hassan; ಬೆಂಕಿ ಆರಿಸಲು ಹೋದ ರೈತ ಬೆಂಕಿಗಾಹುತಿ ಆಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕುಂಚೇವು ಗ್ರಾಮದಲ್ಲಿ ನಡೆದಿದೆ. ನಿನ್ನೆ ಸಂಜೆ ವೇಳೆಗೆ ಕೃಷ್ಣೇಗೌಡ ತಮ್ಮ ಜಮೀನಿನ ಬಳಿ ತೆರಳಿದ್ದಾಗ ಜಮೀನಿಲ್ಲಿದ್ದ ಒಳ ಹುಲ್ಲಿಗೆ ಬೆಂಕಿ ಬಿದ್ದಿರುವುದು ಕಂಡು ತೋಟಕ್ಕೆಲ್ಲಾ ಬೆಂಕಿ ವ್ಯಾಪಿಸುತ್ತದೆ ಎಂದು ಬೆಂಕಿ ನಂದಿಸಲು ಮುಂದಾಗಿದ್ದಾರೆ.

ಜೋರಾಗಿ ಉರಿಯುತ್ತಿದ್ದ ಬೆಂಕಿಗೆ ಕೃಷ್ಣೇಗೌಡ ಸಿಲುಕಿದ್ದರಿಂದ ದೇಹ ಸಂಪೂರ್ಣ ಸುಟ್ಟು ಸ್ಥಳದಲ್ಲೇ ಕುಸಿದು ಬಿದ್ದಿದ್ದರು.ಘಟನೆ ತಿಳಿದ ಗ್ರಾಮಸ್ಥರು ಕೃಷ್ಣೇಗೌಡರನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು.

ಹೆಚ್ಚಿನ ಚಿಕಿತ್ಸೆಗಾಗಿ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣೇಗೌಡ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!