ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಮೊನ್ನೆ ಸಡನ್ನಾಗಿ ವೀಡಿಯೋ ಮೂಲಕ ಪ್ರತ್ಯಕ್ಷವಾಗಿ ಮೇ.31 ರಂದು ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗೋದಾಗಿ ಹೇಳಿದ್ದರು.ಆದರೆ ಈ ಹಿಂದೆ ಎರಡು ಮೂರು ಬಾರಿ ಪ್ರಜ್ವಲ್ ಏರ್ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದರಿಂದ ಅವರು ಬರ್ತಾರಾ ಇಲ್ವೋ ಅನ್ನೋ ಬಗ್ಗೆ ಎಲ್ಲರಲ್ಲೂ ಅನುಮಾನವಿತ್ತು . ಆದ್ರೀಗ ಅವರು ಬರೋದು ಪಕ್ಕಾ ಆಗಿದೆ.

ಇಂದೇ ಬೆಂಗಳೂರಿಗೆ ಸಂಸದ ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದು, ಈಗಾಗಲೇ ಜರ್ಮನಿಯ ಮ್ಯೂನಿಚ್ ಏರ್ ಪೋರ್ಟ್ ಗೆ ಆಗಮಿಸಿದ್ದಾರೆ. ಅಲ್ಲಿ ಅವರು ಲಗೇಜ್ ಚೆಕ್ ಇನ್ ಮಾಡಿರೋದಾಗಿ ತಿಳಿದು ಬಂದಿದೆ. 2 ಟ್ರಾಲಿ ಬ್ಯಾಗ್ ಸಮೇತ ಮ್ಯೂನಿಚ್ ಏರ್ ಪೋರ್ಟ್ ಗೆ ಸಂಸದ ಪ್ರಜ್ವಲ್ ರೇವಣ್ಣ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಜರ್ಮನಿಯ ಮ್ಯೂನಿಚ್ ನಿಂದ ಲುಫ್ತಾ ಏರ್ ಲೈನ್ಸ್ ವಿಮಾನದ ಮೂಲಕ ಬೆಂಗಳೂರಿಗೆ ಇಂದೇ ಸಂಸದ ಪ್ರಜ್ವಲ್ ರೇವಣ್ಣ ಆಗಮಿಸಲಿದ್ದಾರೆ. ಅವರನ್ನು ಎಸ್‌ಐಟಿ ಪೊಲೀಸರು ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಏರ್ ಪೋರ್ಟ್ ನಲ್ಲೇ ಬಂದಿಸೋ ಸಾಧ್ಯತೆ ಇದೆ.

ಹಾಸನ ಪೆನ್ ಡ್ರೈವ್ ವೈರಲ್ ಕೇಸ್, ಅಶ್ಲೀಲ ವೀಡಿಯೋ ಕೇಸ್, ಮಹಿಳೆ ಅಪಹರಣ ಪ್ರಕರಣಗಳನ್ನು ಎದುರಿಸುತ್ತಿರೋ ಸಂಸದ ಪ್ರಜ್ವಲ್ ರೇವಣ್ಣ ಅವರು, ನಿರೀಕ್ಷಣಾ ಜಾಮೀನು ಕೋರಿ ವಿದೇಶದಿಂದಲೇ ನಿನ್ನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಾಳೆ ನಡೆಸಲಿದೆ.
