ರಾಮನಗರ (ಮೇ 2): ರಾಮನಗರ ಕಾಂಗ್ರೆಸ್ ಶಾಸಕ ಎಚ್.ಎ ಇಕ್ಬಾಲ್ ಹುಸೇನ್ ಮತ್ತು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯೂ ಆಗಿರುವ 25 ವರ್ಷದ ಯುವತಿ ಜೊತೆ ಮಾತನಾಡಿರುವ ವಾಟ್ಸಾಪ್ ವಿಡಿಯೋ ಕಾಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖುದ್ದು ಯುವತಿಯೇ, ರಾಮನಗರದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎಫ್ ಐಆರ್ ನಲ್ಲಿ ಏನಿದೆ?
ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಮತ್ತು ನನ್ನ ನಡುವೆ ತಂದೆ ಮಗಳ ಸಂಬಂಧವಿದೆ . ನನ್ನ ಜೊತೆಯಾಗಲಿ ಅಥವಾ ಬೇರೆಯವರ ಜೊತೆಯಾಗಲಿ ಇಕ್ಬಾಲ್ ಹುಸೇನ್ ಯಾವತ್ತೂ ಅಸಭ್ಯವಾಗಿ ವರ್ತಿಸಿಲ್ಲ. ನಮ್ಮಿಬ್ಬರ ವಾಟ್ಸಾಪ್ ವಿಡಿಯೋ ಕಾಲ್ ತಮ್ಮಣ್ಣಗೌಡ ಗುಂಡ್ಕಲ್ ಎಂಬುವವರ ಫೇಸ್ಬುಕ್ ಖಾತೆಯಿಂದ ಶೇರ್ ಆಗಿದೆ.
ವಿಡಿಯೋದಲ್ಲಿ ಒಳ ಉಡುಪಿನಲ್ಲಿರುವ ಹಾಗೆ ನನ್ನನ್ನು ಸೃಷ್ಟಿಸಿ ನನ್ನ ತೇಜೋವಧೆ ಮಾಡಲಾಗಿದೆ. ನಾವಿಬ್ಬರೂ ಮಾತನಾಡಿರುವುದನ್ನ ತಿರುಚಲಾಗಿದೆ . ಈ ವಿಡಿಯೋ ಯಾರು ವೈರಲ್ ಮಾಡಿದ್ದಾರೋ , ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.