ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪರ ಶಿಕಾರಿಪುರದ ಚುನಾವಣಾ ಕಾರ್ಯಾಲಯದ ಮುಂದೆ ವಾಮಾಚಾರ ನಡೆದಿದೆ ಎನ್ನಲಾಗ್ತಿದೆ. ನಿನ್ನೆ ರಾತ್ರಿ ಕಚೇರಿ ಮುಂದೆ ಎರಡು ಗೊಂಬೆ, ಅರಿಶಿಣ ಕುಂಕಮ, ನಿಂಬೆಹಣ್ಣು ಇಟ್ಟು ವಾಮಾಚಾರ ನಡೆದಿದೆ ಎನ್ನಲಾಗ್ತಿದೆ. ಇಂದು ಬೆಳಗ್ಗೆ ಕಾರ್ಯಕರ್ತರು ಕಚೇರಿಗೆ ಬಂದ ವೇಳೆ ವಾಮಾಚಾರ ನಡೆದಿರೋದು ಬೆಳಕಿಗೆ ಬಂದಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಎಸ್.ಈಶ್ವರಪ್ಪ, ಬಿಜೆಪಿಯವರು ಸೋಲಿನ ಭಯದಿಂದ ತನ್ನ ಕಚೇರಿ ಮುಂದೆ ವಾಮಾಚಾರ ನಡೆಸಿದ್ದಾರೆ. ಇದು ಅಪ್ಪ ಮಕ್ಕಳ ಕೃತ್ಯ. ಆದ್ರೆ ತಾನು ಇದ್ಯಾವುದಕ್ಕೂ ಹೆದರಲ್ಲ. ಧರ್ಮ ನನ್ನ ಜೊತೆಗಿದೆ. ಮತದಾರರು ನನ್ನ ಜೊತೆ ಇದ್ದಾರೆ. ದೇವರು ನನ್ನ ಜೊತೆ ಇದ್ದಾನೆ. ಹೀಗಾಗಿ ಯಾವ ವಾಮಾಚಾರಗಳು ನಡೆಯೋದಿಲ್ಲ. ವಾಮಾಚಾರ ಮಾಡಿರುವ ಯಡಿಯೂರಪ್ಪ ವಿರುದ್ಧ ಮತ್ತಷ್ಟೂ ನಾವು ಹೆಚ್ಚಿನ ಕೆಲಸ ಮಾಡ್ತೀವಿ. ಪ್ರಚಾರ ಮುಂದುವರೆಸ್ತೀವಿ ಅಂತ ನಮ್ಮ ಕಾರ್ಯಕರ್ತರು ಸೆಡ್ಡು ಹೊಡೆದು ನಿಂತಿದ್ದಾರೆ. ಖಂಡಿತ ನಾನು ಬಹಳ ದೊಡ್ಡ ಅಂತರದಲ್ಲಿ ಗೆದ್ದೇ ಗೆಲ್ತೀನಿ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.