ಚಿಕ್ಕಮಗಳೂರು : ಸಿಲ್ವರ್ ಮರಕ್ಕೆ ಮರಗಸಿ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಮರದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಂದ್ರಪ್ಪ (45) ಮೃತ ದುರ್ದೈವಿ. ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಯಿಂದ ಈ ಅವಘಡ ಸಂಭವಿಸಿದೆ. ಮರ ನೇರವಾಗಿ ಬೆಳೆಯಲೆಂದು ಸಿಲ್ವರ್ ಮರಕ್ಕೆ ಮರಗಸಿ ಮಾಡ್ತಾರೆ. ಹೀಗೆ ಕಾರ್ಮಿಕ ಚಂದ್ರಪ್ಪ ಸಿಲ್ವರ್ ಮರದ ಅಡ್ಡ ಕೊಂಬೆಗಳನ್ನ ಕಡಿಯುವಾಗ ವಿದ್ಯುತ್ ಪ್ರವಹಿಸಿ ಮರದಲ್ಲೇ ಕಾರ್ಮಿಕ ನೇತಾಡಿ ಸಾವನ್ನಪ್ಪಿದ್ದಾನೆ. ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.