ಬೆಂಗಳೂರು : ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಶ್ರೀ ರಾಘವೇಂದ್ರ ಯೂತ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ಅರಕಲಗೂಡು ಚಾಂಪಿಯನ್ಸ್ ಲೀಗ್ ಸೀಸನ್-03 ʼಸಿದ್ದರಾಮಯ್ಯ ಕಪ್-2025ʼರ ಪೋಸ್ಟರ್ ಅನ್ನು ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಪಂದ್ಯಾವಳಿ ಯಶಸ್ವಿಯಾಗಲಿ ಅಂತ ಸಿಎಂ ಶುಭಹಾರೈಸಿದರು. ಫೆಬ್ರವರಿ ೦೬ರಿಂದ ೦೯ರವರೆಗೆ ಪಂದ್ಯಾವಳಿ ನಡೆಯಲಿದೆ.
ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ಪ್ರಸನ್ನಕುಮಾರ್ ಎಸ್.ಎಸ್, ನಿವೃತ್ತ ಐ.ಎಸ್.ಎಸ್ ಅಧಿಕಾರಿ ರಾಮೇಗೌಡ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ನಿರಂಜನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕುಮಾರ್, ಪಂದ್ಯಾವಳಿಯ ಆಯೋಜಕರಾದ ಹರೀಶ್, ಮಂಜು, ಮಂಜುನಾಥ್, ದಿವಾಕರ್, ವಿಜಯ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
