Sunday, August 3, 2025
!-- afp header code starts here -->
Homeಜಿಲ್ಲಾಸುದ್ದಿಹಾಸನದಲ್ಲಿ 26 ಸರ್ಕಾರಿ ಶಾಲೆಗಳು ಕ್ಲೋಸ್‌ : ಇದಕ್ಕೆಲ್ಲಾ ಯಾರು ಹೊಣೆ?

ಹಾಸನದಲ್ಲಿ 26 ಸರ್ಕಾರಿ ಶಾಲೆಗಳು ಕ್ಲೋಸ್‌ : ಇದಕ್ಕೆಲ್ಲಾ ಯಾರು ಹೊಣೆ?

ಹಾಸನ: 2025 26 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ದಾಖಲಾತಿ ಪ್ರಕ್ರಿಯೆ ಮುಗಿದರು ಜಿಲ್ಲೆಯಲ್ಲಿ ಬಹುತೇಕ ಸರ್ಕಾರಿ ಶಾಲೆಗಳ ಮಕ್ಕಳ ದಾಖಲಾತಿ ಕೊರತೆಯೇ ಎದ್ದು ಕಾಣುತ್ತಿದೆ ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಒಟ್ಟು 26 ಶಾಲೆಗಳನ್ನು ಮುಚ್ಚಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 8 ಶೈಕ್ಷಣಿಕ ವಲಯಗಳಿದ್ದು ಹಾಸನ ವಲಯದ, ಹೊನ್ನಮ್ಮನಹಳ್ಳಿ, ಮೊಮ್ಮಗೌಡನಹಳ್ಳಿ, ಕದರವಳ್ಳಿ ಕಾಲೋನಿ, ಸಜ್ಜೇನಹಳ್ಳಿ ಮತ್ತು ಶೆಟ್ಟಿಹಳ್ಳಿ ಸೇರಿದಂತೆ ಒಟ್ಟು 5 ಶಾಲೆ, ಅರಕಲಗೂಡು ವಲಯದ, ಅರೆಗಲ್ಲು, ಕಾರಹಳ್ಳಿ, ಕೊಪ್ಪಲು ಹರದೂರು, ಹಾರೋಹಳ್ಳಿ ಸೇರಿದಂತೆ ಒಟ್ಟು 4 ಶಾಲೆ, ಬೇಲೂರು ವಲಯದಲ್ಲಿ ಅಗಸರಹಳ್ಳಿ, ತಟ್ಟೆಕೆರೆ, ಕೋಟಿಗನಹಳ್ಳಿ, ಅನುಗ್ರಹ ಶಾಲೆ, ಅರೆಹಳ್ಳಿ, ಮತ್ತು ಎಂ ಆರ್ ಅನುದಾನಿತ ಶಾಲೆ, ಬಿಕ್ಕೋಡು ಸೇರಿದಂತೆ ಒಟ್ಟು 7 ಶಾಲೆ, ಆಲೂರು ವಲಯದ ಮಾವನೂರು ಹಾಡ್ಯಕ್ಕೆ, ಹೊಸಕೋಟೆ, ದಾಖಲಗೂಡು ಒಟ್ಟು 3 ಶಾಲೆ, ಸಕಲೇಶಪುರ ವಲಯದ ಉರ್ದು ಜೆಪಿ ನಗರ ಮತ್ತು ಉರ್ದು ರಾಘವೇಂದ್ರ ನಗರ ಒಟ್ಟು 2 ಶಾಲೆ ಹೊಳೆನರಸೀಪುರದ ವಲಯದ ಗುಲದಪುರ ಒಂದು ಶಾಲೆ, ಅರಸೀಕೆರೆ ವಲಯದ ಸಣ್ಣ ಹಳ್ಳಿ ಒಂದು ಶಾಲೆ, ಚನ್ನರಾಯಪಟ್ಟಣ ವಲಯದ ರಾಮಪುರ ವಿದ್ಯುತ್ ಕಾಲೋನಿ, ನಾರಾಯಣಪುರ, ಕಾಚೇನಹಳ್ಳಿ ಸೇರಿದಂತೆ ಒಟ್ಟು ಮೂರು ಶಾಲೆಗಳು. ಒಟ್ಟು ಎಂಟು ವಲಯಗಳಲ್ಲಿ 26 ಶಾಲೆಗಳನ್ನು ಮುಚ್ಚಿದ್ದು ಒಟ್ಟು 2,392 ಶಾಲೆಗಳು ಚಾಲ್ತಿಯಲ್ಲಿವೆ

ಹೀಗಾಗಿ ಶಾಲೆಗಳನ್ನು ಮುಚ್ಚಿರುವುದರಿಂದ ಈ ಶಾಲೆಯ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನೇಮಿಸಲಾಗುತ್ತಿದೆ ಎಂದು ತಿಳಿದುಬಂದಿದೆ.ಶೂನ್ಯ ದಾಖಲತೆಯಿಂದ ಸರ್ಕಾರಿ ಶಾಲೆಗಳು ಮುಚ್ಚಿದ್ದು ಮತ್ತೆ ಶಾಲೆಗೆ ಮಕ್ಕಳನ್ನುಕರೆ ತರಲು ಗ್ರಾಮದ ಪ್ರತಿ ಮನೆಮನೆಗಳಿಗೆ ಶಿಕ್ಷಕರು ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಿ ವಾಪಸ್ ಶಾಲೆಗೆ ಕರೆ ತರಲು ಶ್ರಮವಹಿಸುತ್ತಿದ್ದಾರೆ‌ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!