ಚಿಕ್ಕಮಗಳೂರು: ರಸ್ತೆ ಗುಂಡಿಗಳಿಗೆ ಬಾಳೆ ಗಿಡ ನೆಟ್ಟು ವಿಭಿನ್ನವಾಗಿ ಪ್ರತಿಭಟನೆ ಮಾಡಿರುವ ಘಟನೆ ಶೃಂಗೇರಿ ತಾಲೂಕಿನ ಕೆಲ್ಲಾರ್ ನಲ್ಲಿ ನಡೆದಿದೆ.
ಹೌದು .. ಕೆಲ್ಲಾರ್‌ನಿಂದ – ಕೋಗಿನಬೈಲು ಸಂಪರ್ಕ ರಸ್ತೆಯಲ್ಲಿ ಸಾಲು ಸಾಲು ಗುಂಡಿಗಳಿದ್ದು ಎಷ್ಟೋ ಬಾರಿ ರಸ್ತೆ ಗುಂಡಿ ಸರಿಪಡಿಸುವಂತೆ ಮನವಿ ಮಾಡಿದ್ದರೂ ಸ್ಥಳೀಯರ ಮಾತಿ ಬೆಲೆ ಇಲ್ಲದಂತಾಗಿ ಸಿಟ್ಟಿಗೆದ್ದು ತಾವೇ ಗುಂಡಿಗಳು ಎಲ್ಲೆಲ್ಲಿ ಇವೆ ಅದರ ಮಧ್ಯ ಬಾಳೆ ಗಿಡಗಳನ್ನು ನೆಟ್ಟು ಅಸಮಾಧಾನ ವ್ಯಕ್ತ ಪಡಿಸಿದರು.
ಹಾಗೆ ರಸ್ತೆ ಗುಂಡಿ ಮುಚ್ಚುವ ಭರವಸೆ ಕೊಟ್ಟು ತಿರುಗಿ ನೋಡದ ಶಾಸಕರು, ಚುನಾವಣಾ ಸಮಯದಲ್ಲಿ ರಸ್ತೆ ಗುಂಡಿ ಮುಚ್ಚುವುದಾಗಿ ಹೇಳಿದ್ದರು ಆದರೆ ಮಳೆಗಾಲದಲ್ಲಿ ರಸ್ತೆ ಗುಂಡಿಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾದರೂ ಊರಿನ ಕಡೆ ಮುಖ ಮಾಡದ ಶಾಸಕರ ವಿರುದ್ಧ ಸ್ಥಳೀಯರು ತಮ್ಮ ಆಕ್ರೋಶವನ್ನು ಹೊರಹಾಕಿದರು.