Monday, August 4, 2025
!-- afp header code starts here -->
Homeಜಿಲ್ಲಾಸುದ್ದಿಹಾಸನದಲ್ಲಿ ಮಗನಿಗೆ ಟೀ ಮಾಡುವಾಗ ಮಹಿಳೆ ಹಠಾತ್‌ ಕುಸಿದು ಬಿದ್ದು ಸಾವು!

ಹಾಸನದಲ್ಲಿ ಮಗನಿಗೆ ಟೀ ಮಾಡುವಾಗ ಮಹಿಳೆ ಹಠಾತ್‌ ಕುಸಿದು ಬಿದ್ದು ಸಾವು!

ಹಾಸನ: ಮಗನಿಗೆ ಟೀ ಮಾಡುವ ವೇಳೆ ಅಡುಗೆ ಮನೆಯಲ್ಲೇ ಮಹಿಳೆ ಹಠಾತ್‌ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಉದಯಗಿರಿ ಬಡಾವಣೆಯಲ್ಲಿ ನಡೆದಿದೆ.

ದಮಯಂತಿ(57) ಮೃತಪಟ್ಟ ಮಹಿಳೆಯಾಗಿದ್ದು, ಮಗ ಟೀ ಕೇಳಿದ ಎಂದು ಅಡುಗೆ ಮನೆಗೆ ಹೋದಾಗ ತಲೆ ಸುತ್ತು ಬಂದು ಅಲ್ಲೇ ಕುಸಿದು ಬಿದ್ದಿದ್ದಾಳೆ ಇದನ್ನು ಗಮನಿಸಿದ ಮಗ ಅಮ್ಮನನ್ನು ಆಸ್ಪತ್ರೆಗೆ ಕೆರೆದುಕೊಂಡು ಹೋಗುವ ದಾರಿ ಮಧ್ಯೆ ಸಾವನ್ನಪ್ಪಿದ್ದಾಳೆ.

ವೈದ್ಯರ ಮಾಹಿತಿ ಪ್ರಕಾರ ಕಾರ್ಡಿಯಾಕ್‌ ಅರೆಸ್ಟ್‌ ಆಗಿದೆ ಎಂದು ತಿಳಿಸಿದ್ದು, ಕೆಲ ವರ್ಷಗಳಿಂದ ಬಿಪಿ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆ ಬೇರೆ ಯಾವುದೇ ರೋಗ ಲಕ್ಷಣಗಳು ಇದುವರೆಗೂ ಕಂಡು ಬಂದಿರಲಿಲ್ಲ.ಮಹಿಳೆಯ ಹಠಾತ್‌ ಸಾವಿನಿಂದ ಮನೆಮಂದಿ ಕಂಗಲಾಗಿ ಭಾರೀ ಶೋಕ ಸಾಗದಲ್ಲಿ ಮುಳುಗಿದೆ.

ಹಾಸನದಲ್ಲಿ ಹೃದಯಘಾತದ ಸರಣಿ ಸಾವುಗಳು ಸಂಭವಿಸಿದ್ದು ಇದರಿಂದ ಜನರು ಇನ್ನಷ್ಟು ಆತಂಕದಲ್ಲೇ ಜೀವನ ನಡೆಸುವಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!