ಚಿಕ್ಕಮಗಳೂರು: ಹಾಸನದಲ್ಲಿ ಹೃದಯಾಘಾತದಿಂದ ಸರಣಿ ಸಾವಾಗುತ್ತಿದ್ದು ಇದರ ಮುಂದುವರೆದ ಭಾಗವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೂಡ ದಿನೇ ದಿನೇ ಸಾವಿನ ಸರಣಿ ಶುರುವಾಗುತ್ತಿದ್ದು ತರೀಕೆರೆಯಲ್ಲೂ ಹೃದಯಾಘಾತದಿಂದ 29 ವರ್ಷದ ಯುವಕ ಮೃತ ಪಟ್ಟಿದ್ದಾನೆ.
ಹೌದು .. ತರೀಕೆರೆ ತಾಲೂಕಿನ ಶಿವನಿ ಗ್ರಾಮದ ಹರೀಶ್ (29) ಮೃತಪಟ್ಟ ಯುವಕನಾಗಿದ್ದು ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.
ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದ ಹರೀಶ್, ಬುಧವಾರ ಬೆಳಗಿನ ಜಾವ 2.30ಕ್ಕೆ ವಾಂತಿ ಮಾಡಿಕೊಂಡಿದ್ದ ಬಳಿಕ ಗ್ಯಾಸ್ಟ್ರಿಕ್ ಮಾತ್ರೆ ತಿಂದು ಮಲಗಿದ್ದ ಹರೀಶ್ ಮತ್ತೆ 3.30ಕ್ಕೆ ವಾಂತಿಯಾಗಿ ಕುಸಿದು ಬಿದ್ದಿದ ಈ ವೇಳೆ ಕುಟುಂಬಸ್ಥರು ಅಜ್ಜಂಪುರ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ದಾಋಇ ಮಧ್ಯ ಸಾವನ್ನಪ್ಪಿದ್ದ.
ಹರೀಶ್ ಇನ್ನೂ ಅವಿವಾಹಿತನಾಗಿದ್ದು, ತೆಂಗಿನಕಾಯಿ ವ್ಯಾಪಾರದ ಜೊತೆ ತೋಟ ನೋಡಿಕೊಂಡಿದ್ದ. ಸಾವಿನಿಂದಾಗಿ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.