ಚಿಕ್ಕಮಗಳೂರು: ಪ್ರಿಯತಮೆ ಎಂದು ಆಂಟಿಯನ್ನು ಪ್ರೀತಿಸುತ್ತಿದ್ದು ಕೋಲಾರದಿಂದ ಹುಡುಕಿಕೊಂಡು ಬಂದ ಯುವಕನಿಗೆ ಕಾದಿತ್ತು ಬಿಗ್ ಶಾಕ್.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಸಕೆರೆಯ ಗೃಹಿಣಿಯ ಲವ್ವಿಡವ್ವಿ ಕಥೆ ಕೇಳಿದರೆ ಒಂದು ಸಲಿ ಯಾರಾದರೂ ಬೆಚ್ಚಿ ಬಿಳೋದು ಸರಿಯೇ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ದ್ವಾರಸಂದ್ರದ ಇಪ್ಪತ್ತೈದು ವಯಸ್ಸಿನ ನವನೀತ್ ಎಂಬ ಯುವಕ ಹುಡುಗಿ ಎಂದು ನಂಬಿ ಗೃಹಿಣಿಯನ್ನು ಪ್ರೀತಿಸಿ ಗುಂಡಿಗೆ ಬಿದ್ದು ಗೋಳಾಡಿದ್ದಾನೆ.
ಕೋಲಾರದಿಂದ ಬಂದ ಯುವಕನಿಗೆ ಪ್ರಿಯತಮೆ ಕಂಡು ಶಾಕ್!
ಇನ್ ಸ್ಟಾದಲ್ಲಿ ಪರಿಚಯವಾಗಿ ಚಾಟಿಂಗ್ ನಲ್ಲಿ ಪ್ರೀತಿ ವಿಷಯ ಪ್ರಸ್ತಾಪವಾಗಿದೆ ಮೂಡಿಗೆರೆ ತಾಲೂಕಿನ ಹೊಸಕೆರೆ ಎಂಬ ಊರಿನ ಅನ್ನಪೂರ್ಣ ನವನೀತ್ ಮನೆಗೆ ಹೋಗಿ ಬಂದು ಮದುವೆ ಪ್ರಸ್ತಾಪ ಕೂಡ ಆಗಿದೆ.ನವನೀತ್ ಬಂಧುಗಳಿಗೆ ವಿಷಯ ತಿಳಿದು ಮದುವೆಗೆ ಒತ್ತಾಯ ಮಾಡಿದ್ದಾರೆ.ಒಂದು ವರ್ಷದಿಂದ ಕಾರಣ,ನೆಪ ಹೇಳಿಕೊಂಡು ಮದುವೆ ಮುಂದೆ ಮಾಡಿಕೊಳ್ಳುವ ಎಂದು ದುಡ್ಡು,ಖಾಸು ತೆಗೆದು ಕೊಂಡು ಬಂದಿದ್ದಾಳೆ ಎನ್ನುತ್ತಾನೆ .
ಇತ್ತೀಚಿಗೆ ಅನ್ನಪೂರ್ಣ ಳ ಮೊಬೈಲ್ ಗೆ ಕರೆ ಮಾಡಿದಾಗ ಅಣ್ಣನ ಮಗನಿಗೆ ಹುಷಾರಿಲ್ಲಾ ಎಂಬ ಕಾರಣ ಹೇಳಿ ನವನೀತ್ ನಂಬರ್ ಬ್ಲಾಕ್ ಮಾಡಿದ್ದಾಳಂತೆ ಹಣ ತೆಗೆದುಕೊಂಡು ಬಂದ ನವನೀತ್ ಹೊಸಕೆರೆಯ ಅನ್ನಪೂರ್ಣ ಮನೆಗೆ ಬಂದು ನೋಡಿದಾಗ ಬೆಚ್ಚಿಬಿದ್ದಿದ್ದಾನೆ.ಅನ್ನಪೂರ್ಣ ಮೂರು ಮಕ್ಕಳ ತಾಯಿ ಗಂಡ ಕೂಡ ಇದ್ದಾನೆ ಎಂದು ತಿಳಿದು ಹಣ ಕಳೆದುಕೊಂಡು ಮೋಸ ಹೋಗಿದ್ದೇನೆ ಎಂದು ತಿಳಿದು ಚಡಪಡಿಸುತ್ತಾ ಆಕ್ರೋಶ ವ್ಯಕ್ತಪಡಿಸಿ ವಂಚನೆಗೊಳಗಾದ ಯುವಕನಿಂದ ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ದೂರು ದಾಖಲಾಗಿದ್ದು, ಅವಳು ಬಂದ್ರೆ ನಾನು ಮದುವೆಯಾಗ್ತೀನಿ ಮಕ್ಕಳನ್ನು ಸಾಕುತ್ತೇನೆ. ನನಗೆ ನ್ಯಾಯ ಬೇಕು ಎಂದು ಎಸ್ಪಿ ಕಚೇರಿ ಮೊರೆ ಹೋಗಿದ್ದಾನೆ.