Wednesday, March 25, 2026
Homeಜಿಲ್ಲಾಸುದ್ದಿಆಲ್ದೂರು: ತನ್ನ ಮರಿಗಳ ಜೊತೆ ರಸ್ತೆ ದಾಟಿದ ಕಾಡಾನೆಗಳ ಹಿಂಡು!

ಆಲ್ದೂರು: ತನ್ನ ಮರಿಗಳ ಜೊತೆ ರಸ್ತೆ ದಾಟಿದ ಕಾಡಾನೆಗಳ ಹಿಂಡು!

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ನಿಲ್ಲುವ ಹಾಗೆ ಕಾಣ್ತಿಲ್ಲ . ಆನೆಗಳ ನಿರಂತರ ಉಪಟಳದಿಂದ ಅಪಾರ ಪ್ರಮಾಣ ಬೆಳೆಗಳು ನಾಶ ಆಗಿ ರೈತರು ಕಂಗಲಾಗುತ್ತಿದ್ದು ಸೋತು ಸೊರಗಿ ಹೋಗಿರೋದು ಮಾತ್ರ ಕಟು ಸತ್ಯ.

ಹೌದು .. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ವಗಾರ್‌ ರಸ್ತೆಯಲ್ಲಿ ಹಾಡಹಗಲಲ್ಲೇ ಆನೆಗಳು ತನ್ನ ಪುಟ್ಟ ಮರಿಗಳ ಜೊತೆ ರಸ್ತೆ ದಾಟುತ್ತಿವೆ.

ಕುಂದೂರು ಸಾರಗೋಡು ಭಾಗದ ಅರಣ್ಯ ಪ್ರದೇಶದಿಂದ ಕೃಷಿ ಜಮೀನುಗಳಿಗೆ ಬಂದು ಉಪಟಳ ನೀಡುತ್ತಿವೆ. ಈ ಭಾಗದಲ್ಲಿ ಟೆಂಟಿಕಲ್‌ ಫೆನ್ಸ್‌ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಆನೆಗಳ ಹಿಂಡು ತನ್ನ ಮರಿಗಳ ಜೊತೆ ರಸ್ತೆ ದಾಟುವುದನ್ನ ಅಲ್ಲಿನ ಸ್ಥಳಿಯರು ತನ್ನ ಮೊಬೈಲ್‌ ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!