ಮೂಡಿಗೆರೆ: ಧರ್ಮಸ್ಥಳದಲ್ಲಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದಂತೆ ಶನಿವಾರ ಆಲ್ದೂರು ಪಟ್ಟಣದ ನಾಡಪ್ರಭು ಕೆಂಪೇಗೌಡ ವೃತ್ತದಲ್ಲಿ ಸಾವಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಗಿರೀಶ್ ಮಾಗರಹಳ್ಳಿ ಮಾತನಾಡಿ, ನಾವು ಧರ್ಮದ ವಿರೋಧಿಗಳಲ್ಲ. ನಾವು ಹೀನ ಕೃತ್ಯಗಳ ವಿರೋಧಿಸುತ್ತೇವೆ. ಎಸ್ ಐ ಟಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ ಅತ್ಯಾಚಾರಿ ಕೊಲೆಗಡುಕರಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದರು.
ಸೌಜನ್ಯ ಪರ ಹೋರಾಟಗಾರ ಜಗದೀಶ್ ಚಕ್ರವರ್ತಿ ಮಾತನಾಡಿ, ರಾಜ್ಯ ಸರ್ಕಾರದ ಎಸ್.ಐ.ಟಿ.ನಿಯೋಜನೆ ಸ್ವಾಗತಾರ್ಹ, ನಾವುಗಳು ಯಾವುದೇ ಧರ್ಮಗಳ ವಿರೋಧಿಗಳಲ್ಲ ನಾವು ಸಂವಿಧಾನತ್ಮಕವಾಗಿ ಪ್ರತಿಯೊಂದು ಧರ್ಮಗಳನ್ನು ಗೌರವಿಸುತ್ತೇವೆ. ನಾವು ಧಾರ್ಮಿಕ ಭಾವನೆಗಳಿಗೆ, ಕ್ಷೇತ್ರಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿಲ್ಲ ಕ್ಷೇತ್ರಕ್ಕೆ ಅಂಟಿರುವ ಕಳಂಕವನ್ನು ತೊಳೆಯಲು ಮುಂದಾಗಿದ್ದೇವೆ.
ಧರ್ಮಸ್ಥಳದಲ್ಲಿ ನಡೆದಿರುವಂತಹ ಪದ್ಮಲತಾ, ವೇದಾವಲ್ಲಿ, ಅನನ್ಯ ಭಟ್, ಯಮುನಾ ಕೊಲೆ ಖಂಡನಿಯ. ಅನೇಕ ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಯನ್ನು ಪ್ರಶ್ನಿಸಲು ಮತ್ತು ನ್ಯಾಯ ಕೇಳಲು ಹಿಂದೂ ನಾಯಕರುಗಳು ಎಂದು ಕರೆಸಿಕೊಳ್ಳುವ ರಾಜಕೀಯ ಪಕ್ಷಗಳ ಮುಖಂಡರುಗಳು ಮುಂದೆ ಬಾರದಿರುವುದು ಹಿಂದೂ ಸಮುದಾಯಕ್ಕೆ ಮತ್ತು ಧರ್ಮಕ್ಕೆ ಮಾಡಿರುವ ಘನಘೋರ ಅನ್ಯಾಯ.
ನೂರಾರು ಶವಗಳನ್ನು ಹೂಳಲಾಗಿರುವ ಪ್ರಮುಖ ಸಾಕ್ಷಿದಾರ ಭೀಮನಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಸರ್ಕಾರ ಮತ್ತು ರಕ್ಷಣಾ ಇಲಾಖೆಯನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಸತೀಶ್, ಆಲ್ದೂರ್ ಹೋಬಳಿ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಗಣೇಶ್. ಮೂಡಿಗೆರೆ ತಾಲೂಕು ಅಧ್ಯಕ್ಷ ಹರೀಶ್ ಕೇಲ್ಲೂರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.