Saturday, February 7, 2026
Homeಜಿಲ್ಲಾಸುದ್ದಿಆಲ್ದೂರು: ಕಾಫಿನಾಡಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ!

ಆಲ್ದೂರು: ಕಾಫಿನಾಡಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ!

ಆಲ್ದೂರು: ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ಅಕ್ಷರಶಃ ಹಬ್ಬದ ವಾತವರಣ. ಕಾರಣ, ನಾಡಪ್ರಭು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಕಂಚಿನ ಪ್ರತಿಮೆ ಆಲ್ದೂರಿನಲ್ಲಿ ಕಂಗೊಳಿಸಿದೆ. ಪರಮಪೂಜ್ಯ ಶ್ರೀ ನಿರ್ಮಲನಂದನಾಥ ಶ್ರೀಗಳು ತಮ್ಮ ಅಮೃತ ಹಸ್ತದಿಂದ ಕೆಂಪೇಗೌಡರ ಪ್ರತಿಮೆಯನ್ನ ಅನಾವರಣಗೊಳಿಸಿದ್ರು. ಆಲ್ದೂರಿನ ಹೃದಯಭಾಗದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಕುದುರೆ ಏರಿದ ನಾಡಪ್ರಭುವಿನ ಪ್ರತಿಮೆಯನ್ನ ನೋಡಿ ಸಾವಿರಾರು ಮಂದಿ ಖುಷಿಪಟ್ಟರು.

https://www.facebook.com/share/r/1CAEASqb7N

ಅದ್ದೂರಿ ಮೆರವಣಿಗೆ ಮೂಲಕ ಭವ್ಯ ಸ್ವಾಗತ ನೀಡಿ ಪರಮಪೂಜ್ಯರನ್ನ ಬರಮಾಡಿಕೊಂಡ ಆಲ್ದೂರು ಒಕ್ಕಲಿಗರ ಸಂಘ, ಈ ಅಪರೂಪದ ಕ್ಷಣವನ್ನ ಹಸಿರಾಗಿಸಿತು. ಇನ್ನೂ ಈ ಕಾರ್ಯಕ್ರಮಕ್ಕೆ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಿದ್ದು, ಸಂಭ್ರಮವನ್ನ ಇಮ್ಮಡಿಗೊಳಿಸಿತು. ಕಾಫಿನಾಡಿನಲ್ಲಿ ಇದೇ ಮೊದಲ ಬಾರಿಗೆ ನಾಡಪ್ರಭುವಿನ ಕಂಚಿನ ಪ್ರತಿಮೆ ತಲೆ ಎತ್ತಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಮುನ್ನುಡಿ ಬರೆದ ಕೀರ್ತಿ ಆಲ್ದೂರಿನ ಒಕ್ಕಲಿಗರ ಸಂಘಕ್ಕೆ ಒಲಿಯಿತು. ಕೆಂಪೇಗೌಡರ ದೂರದರ್ಶಿತ್ವ, ಚಿಂತನೆ ಎಲ್ಲರಿಗೂ ಮಾದರಿಯಾಗಬೇಕು ಅನ್ನೋ ನಿಟ್ಟಿನಲ್ಲಿ, ಆಲ್ದೂರಿನ ಒಕ್ಕಲಿಗರ ಸಂಘ ಇಂತದೊAದು ಮಾದರಿ ಕೆಲಸವನ್ನ ಸದ್ದಿಲದೇ ಮಾಡಿ ಮುಗಿಸಿದೆ..

ಒಂದ್ಕಡೆ ನಾಡಪ್ರಭುವಿನ ಕಂಚಿನ ಪ್ರತಿಮೆ ನೋಡುವ ತವಕ, ಮತ್ತೊಂದೆಡೆ ಬದುಕಿನ ಸಾಕ್ಷತ್ಕಾರ ಮಾಡಿಸುತ್ತಿರುವ ಪರಮಪೂಜ್ಯ ಜಗದ್ಗುರು ಶ್ರೀ ನಿರ್ಮಲನಂದನಾಥ ಮಹಾಸ್ವಾಮೀಜಿಯವರ ದರ್ಶನ ಮಾಡ್ಬೇಕು ಅನ್ನೋ ಉದ್ದೇಶದಿಂದ ಜನಸಾಗರವೇ ಆಲ್ದೂರಿನಲ್ಲಿ ಸೇರಿತು. ಶ್ರೀಗಳನ್ನ ನೋಡಿ, ಅವರ ಮಾತುಗಳನ್ನ ಕೇಳಿ ನೆರೆದಿದ್ದ ಜನರು, ಪುನೀತರಾದ್ರು. ಅಭಿವೃದ್ಧಿಯ ಹರಿಕಾರ, ನಮ್ಮೆಲ್ಲರ ಬದುಕು ಲೀಲಾಜಾಲವಾಗಿ ನಡೆಯಲು ಭದ್ರ ಬುನಾದಿ ಹಾಕಿಕೊಟ್ಟ ಸರದಾರ, ನಾಡಫ್ರಭು ಕೆಂಪೇಗೌಡರ ಎಂತಹ ದೂರದರ್ಶಿತ್ವವನ್ನ ಹೊಂದಿದ್ರು ಅನ್ನೋದನ್ನ ಮನದಟ್ಟಾಗುಂತೆ ಅಥೈಸಿದ್ರು ಶ್ರೀಗಳು.

ಇನ್ನೂ ತಮ್ಮ ಕಾರ್ಯದ ಒತ್ತಡದಿಂದಲೂ ಎಲ್ಲವನ್ನೂ ಬದಿಗಿಟ್ಟು, ಆಲ್ದೂರಿನ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೋಗ್ಬೇಕು ಅಂತಾ ಬಂದಿದ್ದ ಯುವಕರ ಕಣ್ಮಣಿ ನಿಖಿಲ್ ಕುಮಾರಸ್ವಾಮಿ, ಕಾಫಿನಾಡಿಗರ ಪ್ರೀತಿ ಕಂಡು ಸಂತಸಪಟ್ರು. ಶ್ರೀಗಳ ಜೊತೆ ಈ ಕಾರ್ಯಕ್ರಮಕ್ಕೆ ಬಂದಿದ್ದು ನನ್ನ ಪುಣ್ಯ ಅಂದ್ರು..

ಇನ್ನೂ ಕಾರ್ಯಕ್ರಮದಲ್ಲಿ ಶಾಸಕಿ ನಯನಾ ಮೋಟಮ್ಮ, ಶಾಸಕರಾದ ಎಸ್.ಎಲ್ ಭೋಜೇಗೌಡ, ಟಿ.ಡಿ ರಾಜೇಗೌಡ, ಸಿ.ಟಿ ರವಿ, ಮಾಜಿ ಸಚಿವ ಬಿ.ಬಿ ನಿಂಗಯ್ಯ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ ರಾಜಶೇಖರ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಆಲ್ದೂರು ಒಕ್ಕಲಿಗರ ಸಂಘದ ಅಧ್ಯಕ್ಷ ಅಶೋಕ್ ಅವರು ವಹಿಸಿದ್ದರು. ಆಲ್ದೂರು ಒಕ್ಕಲಿಗರ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!