ಚಿಕ್ಕಮಗಳೂರು: ವಸ್ತಾರೆ ಹೋಬಳಿ ವ್ಯಾಪ್ತಿಗೆ ಬರುವ ತೋರಣಮಾವು ಗ್ರಾಮದ ಬೈರೇಶ್ವರ ದೇವಾಲಯದ ಪಕ್ಕದ ಒಳ ರಸ್ತೆಯು ಸುಮಾರು 20 ಕ್ಕೂ ಹೆಚ್ಚು ಮನೆಗಳಿಗೆ ಸಾಗುವ ರಸ್ತೆಯಾಗಿದ್ದು, 30 ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು ದುರಸ್ತಿ ಮಾಡಿಸುವಂತೆ ಆಗ್ರಹಿಸಿದ್ದಾರೆ
ರಸ್ತೆಗೆ ಜಲ್ಲಿ ಕಂಡು 40 ವರ್ಷ ಕಳೆದಿದ್ದು ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದರೂ ಮನವಿಯನ್ನು ತಿರಸ್ಕರಿಸುತ್ತ ಬಂದಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ರಸ್ತೆಯು ಹಲವು ಗ್ರಾಮಗಳಿಗೆ ಕಲ್ಪಿಸುವ ಮಾರ್ಗವಾಗಿದ್ದು, ಈ ರಸ್ತೆ ದುರಸ್ಥಿಗೊಳಿಸುವುದರಿಂದ ಆನೇಕ ಗ್ರಾಮದ ಜನರಿಗೆ ಅನುಕೂಲ ವಾಗುತ್ತದೆ.
ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ತಿರುಗಾಡಲು ಯೋಗ್ಯವಾದ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.