Saturday, February 7, 2026
Homeಕ್ರೈಮ್ಆಲ್ದೂರು: 12 ವರ್ಷದ ಹಿಂದೆ ಅನಗತ್ಯ ಕೇಸ್ ದಾಖಲು ಮಾಡಿದವರ ಮೇಲೆಯೇ ಮತ್ತೆ 307 ಸೆಕ್ಷನ್...

ಆಲ್ದೂರು: 12 ವರ್ಷದ ಹಿಂದೆ ಅನಗತ್ಯ ಕೇಸ್ ದಾಖಲು ಮಾಡಿದವರ ಮೇಲೆಯೇ ಮತ್ತೆ 307 ಸೆಕ್ಷನ್ ಜಾರಿ!

ಆಲ್ದೂರು: ಚಿಕ್ಕಮಗಳೂರು ಜಿಲ್ಲೆಯ ಹಿಂದೂತ್ವದ ಭದ್ರ ಕೋಟೆ ಎಂದೇ ಪ್ರಖ್ಯಾತಿ ಪಡೆದ ಪ್ರದೇಶಗಳಲ್ಲಿ ಒಂದಾದ ಅಲ್ದುರೂ ಪಟ್ಟಣದಲ್ಲಿ 2013ರಲ್ಲಿ ಗಣೇಶ ವಿಸರ್ಜನೆ ಸಮಾರಂಭದಲ್ಲಿ ಮೆರವಣಿಗೆ ಮೂಲಕ ಬರುತ್ತಿದ್ದಾಗ ರಸ್ತೆಯಲ್ಲಿ ಕರ್ಪೂರ ಹಚ್ಚಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಾರೆ ಎಂದು ರಾಕೇಶ್ ಹಳಿಯೂರ್, ಮಂಜುನಾಥ್, ಶ್ರೀಕಾಂತ್, ತುಡುಕೂರು ಮಂಜು,ಲೋಕೇಶ್ ದೊಡ್ಡಮಾಗರವಳ್ಳಿ, ಮಧು ದೊಡ್ಡಮಾಗರವಳ್ಳಿ, ಕೃಷ್ಣಪ್ಪ ಗಾಳಿಗಂಡಿ ಎಂಬುವರ ವಿರುದ್ಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಅಂದು ಠಾಣೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಕೊಲೆ ಪ್ರಯತ್ನ ಮಾಡಿದ್ದನ್ನು ಪ್ರಶ್ನಿಸಿ ಅಂದಿನ ಎಸ್‌ಪಿ ಬಳಿ ದೂರನ್ನು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿತ್ತು. ಸತತ 12 ವರ್ಷಗಳ ಹೋರಾಟದ ನಂತರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.

ಅಂದಿನ ಆಲ್ದೂರು ಪೊಲೀಸ್ ಠಾಣೆ ಠಾಣಾಧಿಕಾರಿ ಕಬ್ಬಾಳ್‌ ರಾಜ್, ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣರಾಜು, ಪೋಲೀಸ್ ಸಿಬ್ಬಂದಿ ಮಂಜಪ್ಪ, ಪ್ರವೀಣ್, ನಿಂಗೇಗೌಡ, ಮಹೇಶ್, ಇಲಿಯಾಜ್, ಜಗದೀಶ್ ನಾಯ್ಕ, ಚಂದ್ರೇಗೌಡ ಇವರ ವಿರುದ್ಧ ಪ್ರತ್ಯೇಕವಾಗಿ ಏಳು ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ..

ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಪ್ರತಿಕ್ರಿಯೆ ನೀಡಿದ ಮಂಜು ತುಡುಕೂರು ಅಂದಿನ ಪೊಲೀಸ್ ಸಿಬ್ಬಂದಿಗಳ ಷಡ್ಯಂತ್ರ ದಿಂದಾಗಿ ಹಿಂದೂ ಕಾರ್ಯಕರ್ತರ ಹತ್ತಿಕ್ಕುವ ಕೆಲಸ ಮಾಡಿದ್ದೂ. ಅನಾಗತ್ಯ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುವ ಹೇಯ ಕೆಲಸ ಮಾಡಿದ್ದಾಗಿ ಆಕ್ರೋಶ ಹೊರ ಹಾಕಿದರೂ.

ಪ್ರಕರಣ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದು ತೀರ್ಪು ಸ್ವಾಗತರ್ಹ. ಖುಷಿ ತಂದಿದೆ. ಸುದೀರ್ಘ ಹನ್ನೆರಡು ವರ್ಷಗಳ ನ್ಯಾಯಾಲಯದ ಹೋರಾಟಕ್ಕೆ ಹೆಮ್ಮೆಯ ವಕೀಲರಾದ ಸುಧಾಕರ್ ಹಳಿಯೂರು ಕಾರ್ಯ ವೈಖರಿ ಹಾಗೂ ಅಲ್ದುರೂ ಜನತೆಯ ಸಹಕಾರ ದಿಂದ ಜಯ ಸಿಕ್ಕಿದ್ದು ಕಾನೂನಿನ ಬಗ್ಗೆ ಅಪಾರ ಗೌರವ ತಂದಿದೆ ಎಂದರು. ಆ ದಿನಗಳಲ್ಲಿ ಜೊತೆಗಿದ್ದು ಅಪಾರ ಹಿಂದೂ ಪರ ಹೋರಾಟಗಳಲ್ಲಿತೊಡಗಿಸಿಕೊಂಡಿದ್ದ ನಮ್ಮನ್ನ ಆಗಲಿದ ಅಪ್ಪಟ ಹಿಂದೂ ಕಾರ್ಯಕರ್ತ ಮಧು ಅವರ ಆತ್ಮಕ್ಕೆ ಈ ಜಯದಿಂದಾಗಿ ಶಾಂತಿ ಲಭಿಸಿದೆ ಎಂದರು.

ಇಡೀ ಆಲ್ದೂರು ಹಿಂದೂ ಬಾಂದವರು ನೀಡಿದರ ಸಹಕಾರಕ್ಕೆ ಧನ್ಯವಾದ ತಿಳಿಸಿದರು.

ವರದಿ : ಪುನೀತ್ ಕಡಿದಾಳು 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!