Wednesday, February 11, 2026
Homeಜಿಲ್ಲಾಸುದ್ದಿರಸ್ತೆ ದಾಟುತ್ತಿದ್ದ ವೇಳೆ ಕಾಡಾನೆ ಮೇಲೆ ಬಿದ್ದ ವಿದ್ಯುತ್ ತಂತಿ : ಮುಂದೇನಾಯ್ತು?

ರಸ್ತೆ ದಾಟುತ್ತಿದ್ದ ವೇಳೆ ಕಾಡಾನೆ ಮೇಲೆ ಬಿದ್ದ ವಿದ್ಯುತ್ ತಂತಿ : ಮುಂದೇನಾಯ್ತು?

ಚಿಕ್ಕಮಗಳೂರು: ರಸ್ತೆ ದಾಟುತ್ತಿದ್ದ ಕಾಡಾನೆಗಳ ಪೈಕಿ ಒಂದರ ಮೇಲೆ ವಿದ್ಯುತ್ ತಂತಿ ಬಿದ್ದು ವಿದ್ಯುತ್ ಸ್ಪರ್ಶಗೊಂಡು ನೆಲಕ್ಕೆ ಬಿದ್ದರೂ ಅದನ್ನು ಅಲ್ಲಿಯೇ ಬಿಟ್ಟುಹೋಗಲು ಬಯಸದ ಇತರೆ ಆನೆಗಳು ಸೊಂಡಿಲಿನಿಂದ ಮೇಲಕ್ಕೆತ್ತಿ ತಮ್ಮೊಂದಿಗೆ ಕರೆದುಕೊಂಡು ಹೋದ ಅಪರೂಪದ ಘಟನೆ ಇದಾಗಿದೆ..

ಸುತ್ತಮುತ್ತಲಿನ ತೋಟಗಳಲ್ಲಿ ಬೀಡುಬಿಟ್ಟಿರುವ ಗಜಪಡೆ ಇಂದು ಅಮ್ಮತ್ತಿ – ಕೊಂಡಂಗೇರಿ ರಸ್ತೆಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಇದರಿಂದ ವಿದ್ಯುತ್ ತಂತಿ ತುಂಡಾಗಿ ರಸ್ತೆ ಹಾಯುತ್ತಿದ್ದ ಆನೆಯೊಂದರ ಮೇಲೆ ತಗಲಾಕಿಕೊಂಡಿದೆ. ವಿದ್ಯುತ್ ಸ್ಪರ್ಶಗೊಂಡ ಆನೆ ಕೆಳಗೆ ಬಿದ್ದಿದೆ. ಇದನ್ನರಿತ ಇತರೆ ಆನೆಗಳು ಕೂಡಲೇ ಅದರ ರಕ್ಷಣೆಗೆ ಧಾವಿಸಿ ಸೊಂಡಿಲಿನಿಂದ ಮೇಲಕ್ಕೆತ್ತಿ ಅದರ ಜೀವ ಉಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!