ಚಿಕ್ಕಮಗಳೂರಿನಲ್ಲಿ ಮತ್ತೊಂದು KSRTC ಬಸ್ ಬೆಂಕಿಗಾಹುತಿಯಾದ ಘಟನೆ ನೆಟ್ಟೆಕೆರೆಹಳ್ಳಿ ಬಳಿ ನಡಿದಿದೆ.
ಹೌದು .. ಚಿಕ್ಕಮಗಳೂರು ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಆಗಿದ್ದು ಇದ್ದಕ್ಕಿದ್ದಂತೆ ಎಂಜಿನ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಚಿಕ್ಕಮಗಳೂರಿನಿಂದ ನೆಟ್ಟಕೆರೆ ಹಳ್ಳಿಗೆ ತೆರಳುತ್ತಿದ್ದ ಗ್ರಾಮಾಂತರ ಸಾರಿಗೆ ಬಸ್ ಈ ವೇಳೆ ಬೆಂಕಿ ಬಿದ್ದದ್ದನ್ನು ಕಂಡು ಗಾಬರಿ ಬಿದ್ದು ಓಡಿದ ಪ್ರಯಾಣಿಕರು ಕೊಡಲೇ ಬಕೆಟ್ ಗಳಿಂದಲೇ ನೀರು ತುಂಬಿ ಬೆಂಕಿ ಆರಿಸಲು ನೆಟ್ಟಕೆರೆಹಳ್ಳಿ ಗ್ರಾಮಸ್ಥರು ಶ್ರಮಿಸಿದರು.
ಮಂಗಳವಾರವಷ್ಟೇ ಒಂದು ಬಸ್ ಬೆಂಕಿ ಅನಾಹುತಕ್ಕೆ ದಾರಿ ಮಾಡಿಕೊಟ್ಟಿದ್ದು ಆದರೂ ಇನ್ನೂ ಎಚ್ಚೆತ್ತುಕೊಳ್ಳದ ಕೆಎಸ್ ಆರ್ ಟಿಸಿ
ಬಸ್ ನಿರ್ವಹಣೆ ವೈಫಲ್ಯದಿಂದ ದಿನಂಪ್ರತಿ ಈ ರೀತಿ ಅವಘಡಗಳು ಸಂಭವಿಸುತ್ತಲೇ ಇರುತ್ತಿದ್ದು , ಕೆಎಸ್ಆರ್ಟಿಸಿ ಬಸ್ ನಿಂದ ದಿನಂಪ್ರತಿ ತೊಂದರೆಗೊಳಗಾಗುತ್ತಿರುವ ಪ್ರಯಾಣಿಕರು ಇದೇ ರೀತಿ ಮುಂದುವರೆದರೆ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದರು.
