ಹಾಸನ: ಗಣಪತಿ ವಿಸರ್ಜನೆ ವೇಳೆ ಕುಣಿದ ಮಂಜುನಾಥ್ ಅದಾದ 30ನಿಮಿಷದ ನಂತರ ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ .
ಹೌದು .. ಭಾನುವಾರ ಸಂಜೆ 4.10 ನಿಮಿಷದ ಆಸುಪಾಸಿನಲ್ಲಿ ತಮಟೆ ಬಡಿದ ಕೇಳಿ ಕೇಳಿ ಕುಣಿಯುತ್ತಿದ್ದ ಮಂಜುನಾಥ್ , 4.42 ರ ಸುಮಾರಿಗೆ ಹೃದಯಾಘಾತದಿಂದ ತನ್ನ ಪ್ರಾಣ ಬಿಟ್ಟಿದ್ದಾನೆ .
ಮೃತ ಮಂಜುನಾಥ್ ಗ್ರಾಮದ ವಾಟರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತಿದ್ದ. ಈ ಮೊದಲೇ ಹೃದಯ ಸಂಬಂಧಿಸಿದ ಕಾಯಿಲೆ ಇತ್ತು ಎನ್ನಲಾಗಿದ್ದು , ದುರದೃಷ್ಟವಶಾತ್ ಸಣ್ಣ ಪ್ರಾಯದಲ್ಲೇ ಅಸುನೀಗಿದ್ದಾನೆ . ಕುಟುಂಬಕ್ಕೆ ಗ್ರಾಮಸ್ಥರು ಧೈರ್ಯ ತುಂಬಿದ್ದಾರೆ.
