ಕೊಪ್ಪ: ತಾಲೂಕಿನ ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಚೂರು ಗ್ರಾಮದ ಮಳೆಗೆ ಮಲೆನಾಡು ಭಾಗದ ರಸ್ತೆಗಳು ಹೊಂಡಮಯವಾಗಿದ್ದು ಡಾಂಬರು ಕಾಣದ ರಸ್ತೆಗಳು ಕೆಸರಿನ ಕೊಂಪೆಯಾಗಿದ್ದು, ವಾಹನ ಸಂಚಾರವಿರಲಿ, ನಡೆದಾಡಲೂ ಸಾಧ್ಯವಾಗದಂತಹ ಸ್ಥಿತಿಗೆ ತಲುಪಿವೆ ಈ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರು ನಿಂತು ಕೆಸರುಮಯವಾದ ರಸ್ತೆಯ ಬಗ್ಗೆ ಹಾಗೂ ಅಲ್ಲಿನ ಅಧಿಕಾರಿಗಳ ಬಗ್ಗೆ ತರಾಟೆ ತೆಗೆದುಕೊಂಡರು
ಸ್ಥಳೀಯ ಯುವಕರು ವಿಡಿಯೋ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ತಹಶೀಲ್ದಾರ್, ತಾಲೂಕು ದಂಡಾಧಿಕಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು,ಪಿಡಿಒ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಅತಿ ಶೀಘ್ರದಲ್ಲಿ ರಸ್ತೆ ದುರಸ್ತಿ ಮಾಡಿ ಕೊಡುವುದಾಗಿ ಹಾಗೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.