ಮೂಡಿಗೆರೆ : ಬಲಗೈ ಸಮುದಾಯ ಒಕ್ಕೂಟ ಮಾರ್ಚ್ 3 ರಂದು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬಂದ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಒಕ್ಕೂಟ ತಿಳಿಸಿದೆ.
ರೋಸ್ಟರ್ ಬಿಂದುವಿನಲ್ಲಿನ ಅಸಮಾನತೆ ಖಂಡಿಸಿ ಮತ್ತು ಹಿಂದಿನ ಮೀಸಲಾತಿಯನ್ನು ಮುಂದುವರೆಸುವಂತೆ ಕೋರಿ ದಿನಾಂಕ 03:03:2026ರಂದು ಮೂಡಿಗೆರೆ ಬಂದ್ ಗೆ ಕರೆಕೊಟ್ಟಿದ್ದುನ್ನು ರಾಜ್ಯ ಸರ್ಕಾರವು ಬೇಡಿಕೆಯಂತೆ ಹಿಂದಿನ ಮೀಸಲಾತಿ ರೋಸ್ಟರ್ ಪದ್ದತಿಯನ್ನು ಸಧ್ಯದ ನೇಮಕಾತಿಗಳಿಗೆ ಅಳವಡಿಸಿರುವುದರಿಂದ ಶನಿವಾರದ ಸಭೆಯಲ್ಲಿ ನಡೆದ ಬಹುಸಂಖ್ಯೆಯ ಸದಸ್ಯರ ಅಭಿಪ್ರಾಯದಂತೆ ತಾತ್ಕಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ ಎಂದು ಸಂಚಾಲಕರಾದ ಶಿವಪ್ರಸಾದ್ ಬಿ.ಇ ರವರು ತಿಳಿಸಿರುತ್ತಾರೆ.
ಬಂದ್ ಕರೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದ ವರ್ತಕರಿಗೆ, ಸಾರ್ವಜನಿಕರಿಗೆ ಹಾಗೂ ಬಂದ್ ನ್ನು ಆಯೋಜಿಸಿ, ಸಹಕರಿಸಿದ ಎಲ್ಲಾ ಬಲಗೈ ಸಮುದಾಯದ ಮುಖಂಡರು ಮತ್ತು ಸದಸ್ಯರಿಗೆ ಈ ಮೂಲಕ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಹೇಳಿದ್ದಾರೆ.
