ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ರೈತರೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಆರ್ .ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ತಡೆದು ಉಗ್ರ ಹೋರಾಟ ನಡೆಸಿದ್ದ ಹಿನ್ನೆಲೆಯಲ್ಲಿ ಅಲರ್ಟ್ ಆದ ಸರ್ಕಾರ ಆನೆ ಸೆರೆಗೆ ಮುಂದಾಗಿದೆ.
ರೈತರು ರೊಚ್ಚಿಗೆದ್ದು ಬೀದಿಗಿಳಿಯುತ್ತಿದ್ದಂತೆ ಸರ್ಕಾರ ಅಲರ್ಟ್ ಆಗಿದ್ದು, ಡಿಸಿ-ಡಿ.ಎಫ್.ಓ ತಕ್ಷಣ ಆನೆ ಸೆರೆಗೆ ಮುಂದಾಗ್ತೀವಿ ಎಂದಿದ್ರು. ಇದೀಗ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಬಿಡಾರದಿಂದ ಕುಮ್ಕಿಯ ನಾಲ್ಕು ಆನೆಗಳು ಕಾಡಾನೆ ಸೆರೆಗೆ ಮುಂದಾಗಿದ್ದು, ಇಂದು ಮಧ್ಯಾಹ್ನದಿಂದಲೇ ಆನೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಡಿಎಫ್ʼಒ ಯಶ್ಪಾಲ್ ಸಾಗರ್ ತಿಳಿಸಿದ್ದಾರೆ.
ಕೊಡಗು, ಮೈಸೂರು, ಶಿವಮೊಗ್ಗದಿಂದ ತಜ್ಞ ವೈದ್ಯರ ಅರವಳಿಕೆ ತಂಡ ಆಗಮಿಸಲಿದ್ದಾರೆ. ಸದ್ಯ ರೈತರ ಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿದ್ದು ಇದೇ ಮೊದಲಾಗಿದೆ.