Thursday, February 26, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು: ಅಡಿಕೆ ಬೆಳೆಗಾರರ ಸಮಸ್ಯೆ ಐಎಎಸ್‌ ಅಧಿಕಾರಿಗಳಿಗೆ ಅರ್ಥ ಆಗಲ್ಲ:ರಮೇಶ್ ಹೆಗ್ಡೆ ಕಿಡಿ!

ಬಾಳೆಹೊನ್ನೂರು: ಅಡಿಕೆ ಬೆಳೆಗಾರರ ಸಮಸ್ಯೆ ಐಎಎಸ್‌ ಅಧಿಕಾರಿಗಳಿಗೆ ಅರ್ಥ ಆಗಲ್ಲ:ರಮೇಶ್ ಹೆಗ್ಡೆ ಕಿಡಿ!

ಬಾಳೆಹೊನ್ನೂರು: ಕಂದಾಯ ಇಲಾಖೆಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸುವ ಸೆಕ್ಷನ್ 4 ಘೋಷಣೆಗೂ ಮುನ್ನ ಜಿಲ್ಲಾಧಿಕಾರಿಯ ಅಭಿಪ್ರಾಯ ಪಡೆಯುವುದು ಕಡ್ಡಾಯ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ ಎಂದು ಶಿವಮೊಗ್ಗ ಅಡಿಕೆ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ತಿಳಿಸಿದರು.

ಖಾಂಡ್ಯ ಪ್ಲಾಂಟರ್ಸ್ ಕ್ಲಬ್‌ನಲ್ಲಿ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಕರ್ನಾಟಕ ಗೋವರ್ಸ್ ಫೆಡರೇಷನ್, ಖಾಂಡ್ಯ ಬೆಳೆಗಾರರ ಸಂಘ ಹಾಗೂ ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ 9ನೇ ಮಾಸಿಕ ಸಭೆಯಲ್ಲಿ ‘ಅರಣ್ಯ ಒತ್ತುವರಿ ಕುರಿತು ಎಸ್‌ಐಟಿ ರಚನೆ’ ಕುರಿತು ಅವರು ಮಾತನಾಡಿದರು.

ಮಲೆನಾಡಿನ ಸಮಸ್ಯೆಗಳ ಗಂಭೀರತೆ ಬೆಂಗಳೂರಿನಲ್ಲಿರುವ ಐಎಎಸ್, ಐಎಫ್‌ಎಸ್ ಅಧಿಕಾರಿಗಳಿಗೆ ಅರ್ಥ-ವಾಗುತ್ತಿಲ್ಲ. ಕಂದಾಯ ಭೂಮಿಯನ್ನು ಸೆಕ್ಷನ್ 4ಕ್ಕೆ ವರ್ಗಾಯಿಸುವ ಮೊದಲು ಜನವಸತಿ ಪ್ರದೇಶ, ಕೃಷಿ ಜಮೀನು ಹಾಗೂ ಇತರ ವಿಷಯಗಳನ್ನು ಪರಿಗಣಿಸಿ

ಅವುಗಳನ್ನು ಕೈ ಬಿಡಬೇಕು. ಕಂದಾಯ ಇಲಾಖೆ ವಶದಲ್ಲಿರುವ ಎಲ್ಲ ಅರಣ್ಯ ಭೂಮಿಯನ್ನು ವರ್ಗಾವಣೆಗೊಳಿಸುವ ಜೊತೆಗೆ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಇದರ ಪರಿಣಾಮ ನಮಗೆ ಗೊತ್ತಿಲ್ಲದೆ ನಮ್ಮ ಪಹಣಿಯಲ್ಲಿ ಅರಣ್ಯ ಇಲಾಖೆ ಹೆಸರು ನಮೂದಾಗುತ್ತಿದೆ. ಶಿವಮೊಗ್ಗದಲ್ಲಿ ಇದರಿಂದಾಗಿ 20 ಸಾವಿರ ಕೃಷಿಕರ ಜಮೀನು ಕೈ ತಪ್ಪಿದ್ದು ಅವರ ಸ್ಥಿತಿ ಅತಂತ್ರವಾಗಿದೆ. ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ಮಾಡದಿದ್ದರೆ ಮಲೆನಾಡಿನ ಜನ ಊರು ಬಿಡುವ ದಿನ ದೂರವಿಲ್ಲ ಎಂದರು.

ಡೀಮ್ಸ್ ಫಾರೆಸ್ಟ್ ಪುನರ್ ಪರಿಶೀಲನೆಗಾಗಿ ಬಹು ವರ್ಷಗಳ ಹೋರಾಟದ ನಂತರ ಸಮಿತಿ ರಚಿಸಲಾಗಿದೆ. ಸಮಿತಿ ಸದಸ್ಯರು ಕೃಷಿ ಭೂಮಿ, ಮನೆ, ರಸ್ತೆ ಮೊದಲಾದ ಜಮೀನುಗಳನ್ನು ಡೀಮ್ಸ್ ವ್ಯಾಪ್ತಿಯಿಂದ ಹೊರಗಿಟ್ಟರೆ ಫಾರಂ 50, 53, 67ರ ಸಾವಿರಾರು ಅರ್ಜಿಗಳು ವಿಲೇವಾ-ರಿಯಾಗಲಿದ್ದು, ಬಹುತೇಕ ಸಮಸ್ಯೆ ಬಗೆಹರಿಯಲಿದೆ. ಸರ್ಕಾರ ಮಾಡಿದ ತಪ್ಪಿಗೆ ರೈತರು ಬಲಿಯಾಗಿದ್ದಾರೆ. ಟಿಬೆಟನ್ನರಿಗೆ ಸರ್ಕಾರ ಡಿನೋಟಿಫೈ ಮಾಡಿ ಜಮೀನು ನೀಡುತ್ತದೆ. ಆದರೆ, ಮೂಲ ನಿವಾಸಿಗಳಿಗೆ ನೀಡಲು ಹಿಂದೆಟು

ಕಾರ್ಯದರ್ಶಿ ವಿಜಯಕುಮಾ‌ರ್ ಮಾತನಾಡಿ, ಸರ್ಕಾರ ಡೀಮ್ಸ್ ಬಗ್ಗೆ ಯಾವುದೇ ಸ್ಪಷ್ಟ ಆದೇಶ ನೀಡಿಲ್ಲ. ಆಡಳಿತ ಮಾಡುವವರು ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳು ತ್ತಿಲ್ಲ. ಸಂಘಟನೆಯ ಹೋರಾಟ ವಿಚಾರ, ಸಿದ್ದಾಂತದ ಮೇಲಿರಬೇಕು. ವ್ಯಕ್ತಿ ರಾಜಕಾರಣದ ಮೇಲೆ ಬೇಡ ಎಂದು ಸಲಹೆ ನೀಡಿದರು.

ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ನ.6ರಿಂದ 8ರವರೆಗೆ ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರದಲ್ಲಿ ಶತಮಾನೋತ್ಸವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಆಯೋಜಿಸಿರುವ

2025ನೇ ಸಾಲಿನಲ್ಲಿ ಅತಿಯಾದ ಗಾಳಿ, ಮಳೆಯಿಂದ ಬೆಳೆಹಾನಿ ಕುರಿತು ಕೆ.ಜಿ.ಎಫ್ ಅಧ್ಯಕ್ಷ ಎಚ್.ಬಿ.ಶಿವಣ್ಣ ಮಾತನಾಡಿದರು. ಕಾಫಿ ಮಂಡಳಿ ಸಿಇಒ ಕುರ್ಮರಾವ್, ಕೆ.ಜಿ.ಎಫ್ ಖಜಾಂಚಿ ಎಂ.ಕೆ.ಸುಂದರೇಶ್, ಉಪಾಧ್ಯಕ್ಷ ಕೆ.ಕೆ.ವಿಶ್ವನಾಥ್, ಖಾಂಡ್ಯ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಸ್. ವಿ.ಶಂಕರ್, ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಜಯರಾಜ್ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!