ಬಾಳೆಹೊನ್ನೂರು: ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನ ಟೈರ್ ಕಳಚಿ ಬಿದ್ದಿರುವ ಆಘಾತಕಾರಿ ಘಟನೆ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಹೌದು .. ಬಾಳೆಹೊನ್ನೂರು ಬೈರೆಗುಡ್ಡದಲ್ಲಿರುವ ಕಾಲಭೈರವೇಶ್ವರ ದೇವಸ್ಥಾನ ಸಮೀಪ ಬಸ್ ಚಲಿಸುತ್ತಿದ್ದಾಗಲೇ ಟೈಯರ್ ಅಕಸ್ಮಿಕವಾಗಿ ಕಳಚಿ ಬಿದ್ದಿದ್ದಿ ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

KSRTC ಬಸ್ ಗಳ ಶೋಚನೀಯ ಸ್ಥಿತಿ ಕಂಡು ಅಲ್ಲಿನ ಸ್ಥಳೀಯರು ಮತ್ತು ಪ್ರಯಾಣಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆ ಬಸ್‌ಗಳ ನಿಯಮಿತ ಪರಿಶೀಲನೆ ಮತ್ತು ನಿರ್ವಹಣೆಯಲ್ಲಿ ಹೆಚ್ಚಿನ ಗಮನ ಹರಿಸುವಂತೆ ಆಗ್ರಹ ಪಡಿಸಿದ್ದಾರೆ.
ವರದಿ: ಶಾಲಿನಿ ಪಿ.ಗೌಡ
