ಎನ್ ಆರ್ ಪುರ: ಬಾಳೆಹೊನ್ನೂರು ಹಾಗೂ ಜಯಪುರ ಪಟ್ಟಣದ ಮಧ್ಯ 2010 11ರಲ್ಲಿ ಕಾಂಕ್ರೀಟ್ ರಸ್ತೆ ಮಾಡಲಾಗಿತ್ತು. ಅಂದು ಮಾಡಿದ ರಸ್ತೆಯು ಕಳಪೆ ಕಾಮಗಾರಿಯಿಂದ ಕೂಡಿದ ಹಿನ್ನೆಲೆಯಲ್ಲಿ ದೂರು ನೀಡಲಾಗಿತ್ತು ಪರಿಶೀಲಿಸಿದ ಅಧಿಕಾರಿಗಳು ಸರ್ಕಾರಕ್ಕೆ ದಂಡ ವಿಧಿಸಿದ್ದ ಬಗ್ಗೆ ಪತ್ರಿಕೆಗಳಿಗೆ ತಡವಾಗಿ ಮಾಹಿತಿ ಲಭ್ಯವಾಗಿದೆ.
2010- 11ರಲ್ಲಿ ಅಂದಿನ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಕುಕ್ಕೂಡಿಗೆ ರವೀಂದ್ರರವರು ಜಿಪಂ ಸಿಇಒ ರಾಗಪ್ರಿಯರವರಿಗೆ ದೂರು ನೀಡಿದ್ದು ಸ್ಥಳ ಪರಿಶೀಲನೆ ಮಾಡಿದ್ದು ಅವಧಿಯಲ್ಲಿ ಕಾಂಕ್ರೀಟ್ ಕಿತ್ತು ಹೋಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದರು.
ಕಾಂಕ್ರೀಟ್ ರಸ್ತೆಯ ಭದ್ರತೆ 30 ವರ್ಷವಾಗಿದ್ದು ಆದರೆ ಒಂದೇ ವರ್ಷದಲ್ಲಿ ಕಿತ್ತು ಬಂದಿರುತ್ತದೆ ಮುಖ್ಯ ರಸ್ತೆಯ ಸುದರ್ಶನ ಚಿತ್ರಮಂದಿರಕ್ಕೆ ಹೋಗುವ ದಾರಿಯಲ್ಲಿ ಗುಂಡಿ ಬಿದ್ದಿದ್ದು ಈ ಬಗ್ಗೆ ಕಾಂಕ್ರೀಟ್ ಸರ್ಫೆಸ್ ಟ್ರೀಟ್ಮೆಂಟ್ ಮಾಡಿ ರಸ್ತೆ ದುರಸ್ತಿ ಮಾಡಿದ್ದರು. ಇದೀಗ ಗುಡ್ ಲಕ್ ಮೆಡಿಕಲ್ ಮುಂಭಾಗದಲ್ಲಿ ಗುಂಡಿ ಬಿದ್ದಿದ್ದು ಕಾಂಕ್ರೀಟ್ ಹಾಖಬೇಕು ಇಲ್ಲವೇ ಮಣ್ಣು ಮುಚ್ಚಬೇಕು ಇಲ್ಲದಿದ್ದರೆ ಡಾಂಬರೀಕರಣ ಮಾಡಬೇಕು.
ಹಾಗೆ ಡೋಬಿ ಹಳ್ಳದ ಸೇತುವೆ ಮೇಲೆ ಗುಂಡಿ ಬಿದ್ದಿದ್ದು 10 ವರ್ಷದ ಅವಧಿಯಲ್ಲಿ 10 ಬಾರಿ ಕಾಂಕ್ರಿಟ್ ಹಾಕಿ ರಸ್ತೆ ದುರಸ್ತಿ ಮಾಡಿದರು ಇದೀಗ ಕಾಂಕ್ರೀಟ್ ಕಿತ್ತು ಹೋಗಿ ಪುನಹ ಗುಂಡಿ ಬಿದ್ದಿದೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಉತ್ತರ ನೀಡಬೇಕಿದೆ.
