ಎನ್ ಆರ್ ಪುರ: ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರ ಓಡಾಟ ಕಡಿಮೆಯಾದ ಹಿನ್ನೆಲೆಯಲ್ಲಿ ಗ್ರಾಮಗಳ ಅಂಚಿಗೆ ಬರುತ್ತಿದ್ದ ಕಾಡಾನೆಗಳು ಹಾಗೂ ಕಾಡುಪ್ರಾಣಿಗಳು ಈಗ ಗ್ರಾಮದೊಳಕ್ಕೆ ನುಗ್ಗಿ ಬರುತ್ತಿದ್ದು ಆರಾಮವಾಗಿ ಹಾಡಹಗಲೇ ಕಾಡಾನೆಗಳು ಓಡಾಡುತ್ತಿವೆ.
ಹೌದು .. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಳವಾಗಿದ್ದು ನಿರಂತರವಾಗಿ ಅಲ್ಲಿನ ಸ್ಥಳೀಯರಿಗೆ ಉಪಟಳ ನೀಡುತ್ತಲೇ ಬಂದಿವೆ. ಇಂದು ಹಾಡಹಗಲೇ ಬಾಳೆಹೊನ್ನೂರು ಜಯಪುರ ರಸ್ತೆ ದಾಟುತ್ತಿರುವ ಕಾಡಾನೆಗಳು ರಾಜಾರೋಷವಾಗಿ ಬಿಂದಾಸ್ ಆಗಿ ಓಡಾಡುತ್ತಲೇ ಇವೆ. ಆದರೆ ಅಲ್ಲಿನ ಸ್ಥಳೀಯರು ಮಾತ್ರ ಹೆದರುತ್ತಲೇ, ಜೀವ ಕೈಯಲ್ಲಿ ಇಟ್ಟುಕೊಂಡು ವಾಹನಗಳನ್ನು ಓಡಿಸಬೇಕಾಗಿದೆ.
ಆದರೆ ಅರಣ್ಯಾಧಿಕಾರಿಗಳು ಕಾಡಾನೆಗಳು ತಮ್ಮ ಸ್ವಸ್ಥಾನಕ್ಕೆ ಮರಳುತ್ತಿವೆ ಯಾರೂ ಅವರಿಗೆ ತೊಂದರೆ ಕೊಡದಂತೆ ಓಡಾಡಬೇಕಿದೆ ಎಂದು ಸ್ಥಳೀಯರಿಗೆ ಮನವಿ ಮಾಡಿದ್ದಾರೆ.
