ಜಯಪುರ : ಬಾಳೆಹೊನ್ನೂರು ಪ್ರಾಂತ್ಯದ ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆಯ ಹೊಸ ಪದಾಧಿಕಾರಿಗಳ ಆಯ್ಕೆಯ ಚುನಾವಣೆ ಇತ್ತೀಚೆಗೆ ಲೂರ್ದುಮಾತೆಯ ದೇವಾಲಯ, ಮಾಗುಂಡಿಯಲ್ಲಿ ನಡೆಯಿತು.

ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆಯ ಭಾರತ ರಾಷ್ಟ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಮನೋಹರ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಬ್ರದರ್ ಒಲಿವರ್ ಫರ್ನಾಂಡೋ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಬಾಳೆಹೊನ್ನೂರು ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಥಾಮಸ್ ಅವರು ಅಮೂಲ್ಯ ಸಲಹೆ–ಸೂಚನೆ ನೀಡಿ ಸಹಕಾರ ನೀಡಿದರು. ಜೊತೆಗೆ ರಾಷ್ಟ್ರೀಯ ಕಾರ್ಯದರ್ಶಿಯಾದ ಸಿಸ್ಟರ್ ಐರಿನ್ ಅವರು ಕೂಡ ಈ ಚುನಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚುನಾವಣೆಯಲ್ಲಿ ಬಾಳೆಹೊನ್ನೂರು ಪ್ರಾಂತ್ಯದ ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆಯ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಅಲೆಕ್ಸ್ ಜಯಶೀಲನ್ ಆಯ್ಕೆಯಾದರು.
ಮುಂದಿನ ಮೂರು ವರ್ಷಕ್ಕೆ ಆಯ್ಕೆಯಾದ ಪದಾಧಿಕಾರಿಗಳು ಅಧ್ಯಕ್ಷರಾಗಿ ಅಲೆಕ್ಸ್ ಜಯಶೀಲನ್ (ಕೊಪ್ಪ ಘಟಕ), ಉಪಾಧ್ಯಕ್ಷರಾಗಿ ಡೆನ್ನಿಸ್ ಡಿಸೋಜಾ (ಕುವೆ ಘಟಕ), ಕಾರ್ಯದರ್ಶಿಗಳಾಗಿ ಲಿಯೋ ಮಥಾಯಸ್ (ಮಾಗುಂಡಿ ಘಟಕ), ಕೋಶಾಧ್ಯಕ್ಷರಾಗಿ ಸೆಲಿನ್ ಜೋಸೆಫ್ (ಕೊಪ್ಪ ಘಟಕ), ತರಬೇತಿ ಶಿಕ್ಷಕಿಯಾಗಿ ತೆಲ್ಮಾ ಜಯಶೀಲನ್ (ಕೊಪ್ಪ ಘಟಕ), ಪ್ರಾಂತ್ಯದ ಪ್ರತಿನಿಧಿಗಳಾಗಿ ಲಿಲ್ಲಿ ಮೋರಿಸ್ (ಬಣಕಲ್ ಘಟಕ), ವಿನ್ನಿ ರೊಡ್ರಿಗಸ್ (ಮಾಗುಂಡಿ ಘಟಕ)
ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ಹಾಗೂ ಸೌಹಾರ್ದ ವಾತಾವರಣದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಭಾಗವಹಿಸಿದ ಚರ್ಚಿನ ಧರ್ಮ ಗುರುಗಳು ಕ್ರೈಸ್ತ ಬಾಂಧವರು ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ವರದಿ: ಶಶಿ ಬೆತ್ತದಕೊಳಲು
