ಚಿಕ್ಕಮಗಳೂರು: ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ದಿನಕ್ಕೊಂದು ಅವಾಂತರಗಳು ಸೃಷ್ಟಿಯಾಗುತ್ತಲೇ ಇದೆ ಅದೇ ರೀತಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬಾಳೂರು ಹೋಬಳಿ ಮಾಳಿಂಗನಾಡು ಗ್ರಾಮದ ನೆಲ್ಲಿಕಟ್ಟೆ ಅಂಗನವಾಡಿ ಹಿಂಭಾಗದ ಧರೆಯ ಮಣ್ಣು ಕುಸಿದಿದ್ದು ಅಂಗನವಾಡಿ ಶಾಲೆಯಲ್ಲಿ ಇದ್ದ ಮಕ್ಕಳು ಹೆದರಿ ಬಿಟ್ಟರು.
ಘಟನೆಯ ತೀವ್ರತೆಯನ್ನು ಅರಿತ ಬಾಳೆಹಡ್ಲು ಎಸ್ಟೇಟ್‌ನ ಮ್ಯಾನೇಜರ್ ಜೈಪಾಲ್ ಅವರು ಸ್ಥಳೀಯರನ್ನು ಕರೆಸಿ ತಕ್ಷಣವೇ ಮಣ್ಣು ತೆರವುಗೊಳಿಸುವ ಕೆಲಸ ಆರಂಭಿಸಿದರು. ಯಾವುದೇ ಸರ್ಕಾರಿ ಅಥವಾ ಹೊರಗಿನ ಸಹಾಯಧನವಿಲ್ಲದೇ ಸ್ವಂತ ಮಟ್ಟದಲ್ಲಿ ಈ ಕಾರ್ಯವನ್ನು ನಡೆಸಿದ್ದಾರೆ. ಹಾಗೆ ಮಕ್ಕಳ ಹಿತಕ್ಕಾಗಿ ತಕ್ಷಣ ಕ್ರಮ ತೆಗೆದುಕೊಂಡು ಮಣ್ಣು ಎತ್ತಲಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ನಿರಂತರ ಮಳೆಯಿಂದಾಗಿ ಇನ್ನಷ್ಟು ಮಣ್ಣು ಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಂಬಂಧಿತ ಅಧಿಕಾರಿಗಳು ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.