Thursday, February 12, 2026
Homeಕ್ರೈಮ್ಬೇಲೂರು: ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು!

ಬೇಲೂರು: ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು!

ಹಾಸನ: ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಕೃಷ್ಣ (50) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ. ಹಾಸನ ತಾಲೂಕಿನ, ಜಕ್ಕೇನಹಳ್ಳಿ ಗ್ರಾಮದ ಕೃಷ್ಣ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದರು. ಅವರ ಅಳಿಯ ದಿನೇಶ್ ಹಿಂದೆಯೇ ನಡೆದುಕೊಂಡು ಬರುತ್ತಿದ್ದು, ಬುಧವಾರ ರಾತ್ರಿ ಮೊದಲು ಚೀಕನಹಳ್ಳಿ ಗ್ರಾಮ ತಲುಪಿದ ಕೃಷ್ಣ ಅಳಿಯ ಅಲ್ಲಿಗೆ ಬರುವವರೆಗೂ ಚೀಕನಹಳ್ಳಿ ಗ್ರಾಮದ ಆಟೋ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯಲು ಮಲಗಿದ್ದರು. ಅಳಿಯ ದಿನೇಶ್ ಆಟೋ ನಿಲ್ದಾಣಕ್ಕೆ ಬಂದು ಮಾವನನ್ನು ಎಬ್ಬಿಸಿದ್ದು, ಅಷ್ಟರಲ್ಲಿ ಮಲಗಿದಲ್ಲಿಯೇ ಸಾವನ್ನಪ್ಪಿದ್ದರು.

ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!