ಬೇಲೂರು: ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಬೇಲೂರಿನ ಬೆಡಗಿ ನಿದರ್ಶನ.
ಹೌದು ಈಕೆಯ ಸಾಧನೆ ಬರಿ ಬೇಲೂರು. ಅಲ್ಲದೆ ಇಡೀ ದೇಶದ ಪ್ರತಿ ಹೆಣ್ಣುಮಕ್ಕಳಿಗೂ ಸ್ಫೂರ್ತಿಯಾಗಿದೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗ್ರಾಮೀಣ ಪ್ರದೇಶಗಳ ಕ್ರೀಡಾ ಸಾಧಕರನ್ನು ಗುರುತಿಸಿ ಕೊಡುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ರಾಷ್ಟ್ರ ಮಟ್ಟದ ಕಬ್ಬಡಿ ಆಟಗಾರ್ತಿ ಶ್ರೀಮತಿ ಆತ್ಮೀಯ ಸಂತೋಷ್ ಅವರು ಭಾಜನರಾಗಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಯುವನಿಧಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ.
ಅತ್ಮೀಯ ಅವರು ಮೂಲತಃ ಬೇಲೂರು ತಾಲೂಕಿನ ಮರವತ್ತಿ ಗ್ರಾಮದ ಲತಾ ಭದ್ರೇಗೌಡ ದಂಪತಿಗಳ ಪುತ್ರಿಯಾಗಿದ್ದು ಬಾಲ್ಯ ಹಾಗೂ ಪ್ರೌಢ ಶಿಕ್ಷಣವನ್ನು ಗೆಂಡೆಹಳ್ಳಿ ಶಾಲೆಯಲ್ಲಿ ಹಾಗೂ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಆಳ್ವಾಸ್ ಸಂಸ್ಥೆಯಲ್ಲಿ ಪಡೆದಿರುತ್ತಾರೆ. ಗ್ರಾಮೀಣ ಪ್ರತಿಭೆಯಾಗಿ ಕಬ್ಬಡ್ಡಿ ಆಟದಲ್ಲಿ ಹೆಚ್ಚು ಒಲವು ತೋರಿಸಿ ವಿವಿಧ ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಭಾಗಿಯಾಗುವುದರ ಜೊತೆಗೆ ಅನೇಕ ಬಾರಿ ಪದಕ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಖಂಡಿದ್ದಾರೆ.
ಇವರ ಪತಿ ಸಂತೋಷ್ ಸಹ ಕಬ್ಬಡ್ಡಿ ಆಟಗಾರರಾಗಿದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿ ಇದೀಗ ಉನ್ನತ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮಡದಿಯ ಸಾಧನೆಯನ್ನು ಪ್ರಶಂಸಿದ್ದಾರೆ.
ಇವರ ಸಾಧನೆಗೆ ಸ್ನೇಹ ಬಳಗ ತರಬೇತು ದಾರರು, ಶಿಕ್ಷಕ ವೃಂದ, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಶುಭಾಶಯ ತಿಳಿಸಿದ್ದಾರೆ
ಇಂತಹ ಪ್ರತಿಭೆಗಳನ್ನು ಗುರುತಿಸಿ ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆ ಇದ್ದು ಸರ್ಕಾರ ರಾಜ್ಯೋತ್ಸವ ಹಾಗೂ ಇನ್ನಿತರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಿ ಎಂಬ ಆಶಯದೊಂದಿಗೆ ಡಿಜಿಟಲ್ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದ ಪಬ್ಲಿಕ್ ಇಂಪ್ಯಾಕ್ಟ್ ತಂಡ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆದು ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ ಎಂದು ಹಾರೈಸುತ್ತೇವೆ
ವರದಿ:ಪುನೀತ್ ಕಡಿದಾಳು
9483811948
